ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಎಂ ಎಲ್ ಎ ಟಿಕೆಟ್ ಗಾಗಿ ಐದು ಕೋಟಿ ಹಣ ಪಡೆದು ವಂಚನೆ ಕೇಸ್ ವಿಚಾರವಾಗಿ ದೆಹಲಿಯಲ್ಲಿ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಬಿಜೆಪಿ ಹಣ ಕೊಟ್ಟು ಟಿಕೆಟ್ ಖರೀದಿಸಲು ಸಾಧ್ಯವಿಲ್ಲ. ಹಣ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಯಾರು ಕೂಡ ಮಾಡಬಾರದು ಎಂದು ಹೇಳಿದರು.
ಒಂದು ವೇಳೆ ಆಯತ್ನಿಸಿದರೆ ಮತ್ತೊಬ್ಬ ಗೋವಿಂದ ಬಾಬು ಪೂಜಾರಿ ಆಗುತ್ತೀರಿ. ಮೋಸ ಮಾಡಲೆಂದು ದೊಡ್ಡವರ ಹೆಸರು ಬಳಕೆ ಮಾಡಲಾಗುತ್ತದೆ. ಚುನಾವಣಾ ಸಮಿತಿಯಲ್ಲಿ ಇದ್ದವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಬಿಜೆಪಿ ದೊಡ್ಡ ಪಕ್ಷವಾಗಿದೆ ಎಲ್ಲಾ ರೀತಿಯ ಜನರು ಸಹ ಇದ್ದಾರೆ. ಕೆಲವರು ಸಮಯದ ದುರ್ಬಳಕೆ ಮಾಡಿಕೊಳ್ಳಲು ಪಕ್ಷಕ್ಕೆ ಬರುತ್ತಾರೆ ಎಂದು ರವಿ ಹೇಳಿದರು.