ಮಾಜಿ ಸಂಸದನ ಹತ್ಯೆ ಪ್ರಕರಣ: ಸಿಬಿಐನಿಂದ ಆಂಧ್ರ ಸಿಎಂ ಜಗನ್​ಮೋಹನ್​ ರೆಡ್ಡಿ ಚಿಕ್ಕಪ್ಪ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಾಜಿ ಸಂಸದ ವಿವೇಕಾನಂದರೆಡ್ಡಿ ಹತ್ಯೆ ಪ್ರಕರಣದಲ್ಲಿ ವೈಎಸ್‌ಆರ್‌ಸಿಪಿ ಕಡಪ ಸಂಸದ ವೈ.ಎಸ್.ಅವಿನಾಶ್‌ ರೆಡ್ಡಿ ಅವರ ತಂದೆ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ಮೋಹನ್​ ರೆಡ್ಡಿ ಅವರ ಚಿಕ್ಕಪ್ಪ ಭಾಸ್ಕರ್​ ರೆಡ್ಡಿ ಅವರನ್ನು ಕೇಂದ್ರ ತನಿಖಾ ದಳ ಭಾನುವಾರ ಬೆಳಗ್ಗೆ ಬಂಧಿಸಿದೆ.

2019ರ ಮಾರ್ಚ್‌ 15 ರಂದು ವಿವೇಕಾನಂದ ರೆಡ್ಡಿ ಆಂಧ್ರಪ್ರದೇಶದ ಪುಲಿವೆಂದುಲದಲ್ಲಿರುವ ತಮ್ಮ ನಿವಾಸದಲ್ಲೇ ಹತ್ಯೆಯಾಗಿದ್ದರು. ರಾಜ್ಯ ವಿಧಾನಸಭಾ ಚುನಾವಣೆಗೂ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿತ್ತು.

ರಾಜ್ಯದ ಅಪರಾಧ ತನಿಖಾ ದಳದ ವಿಶೇಷ ತನಿಖಾ ತಂಡ ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿತ್ತು. ನಂತರ 2020ರ ಜುಲೈನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಭಾಸ್ಕರ್ ರೆಡ್ಡಿ ಅವರ ಬಂಧನವು 48 ಗಂಟೆಗಳಲ್ಲಿ ಸಿಬಿಐ ನಡೆಸಸಿದ ಎರಡನೇ ಬಂಧನವಿದಾಗಿದೆ.

ಕಡಪ ಸಂಸದ ವೈಎಸ್ ಅವಿನಾಶ್ ರೆಡ್ಡಿ ಅವರ ಆಪ್ತ ಗಜ್ಜಲ ಉದಯ್ ಕುಮಾರ್ ರೆಡ್ಡಿ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದ್ದರು.

ಭಾನುವಾರದಂದು ಬೆಳಗ್ಗೆ ಎರಡು ವಾಹನಗಳಲ್ಲಿ ಪುಲಿವೆಂದುಲದಲ್ಲಿರುವ ಭಾಸ್ಕರ್ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ ಸಿಬಿಐ ಅಧಿಕಾರಿಗಳು ಭಾಸ್ಕರ್ ರೆಡ್ಡಿಯನ್ನು ವಶಕ್ಕೆ ಪಡೆದು ಅವರ ಕುಟುಂಬ ಸದಸ್ಯರಿಗೆ ಅರೆಸ್ಟ್​ ವಾರೆಂಟ್​ ಅನ್ನು ನೀಡಿದೆ.

ಭಾಸ್ಕರ್ ರೆಡ್ಡಿ ಬಂಧನದ ವಿಷಯ ತಿಳಿಯುತ್ತಿದ್ದಂತೆ ವೈಎಸ್​ಆರ್​ಪಿ ಕಾರ್ಯಕರ್ತರು ಹಾಗೂ ಸಂಸದರ ಅನುಯಾಯಿಗಳು ಅವರ ನಿವಾಸದ ಬಳಿ ಜಮಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!