ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಕಚೇರಿ ಮೇಲೆ ಸಿಬಿಐ ದಾಳಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಅವರ ಸೆಕ್ರೆಟರಿಯೇಟ್‌ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ.

ಇಂದು ಮತ್ತೆ ಸಿಬಿಐ ನನ್ನ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ, ಅವರಿಗೆ ಸ್ವಾಗತ. ಅವರು ನನ್ನ ಮನೆ ಮೇಲೆ ದಾಳಿ ಮಾಡಿದರು, ನನ್ನ ಕಚೇರಿ ಮೇಲೆ ದಾಳಿ ಮಾಡಿದರು, ನನ್ನ ಲಾಕರ್ ಅನ್ನು ಶೋಧಿಸಿದರು, ನನ್ನ ಹಳ್ಳಿಯಲ್ಲೂ ತನಿಖೆ ನಡೆಸಿದರು, ನನ್ನ ವಿರುದ್ಧ ಏನೂ ಕಂಡುಬಂದಿಲ್ಲ ಮತ್ತು ನಾನು ಏನು ಅಸ್ತಿ ಮಾಡದ ಕಾರಣ ಏನೂ ಸಿಗುವುದಿಲ್ಲ. ಏನಾದರೂ ತಪ್ಪಾಗಿದೆ ಎಂದು ಸಿಸೋಡಿಯಾ ಟ್ವೀಟ್‌ನಲ್ಲಿ ಮಾಡಿದ್ದಾರೆ.

ಆದ್ರೆ ಇತ್ತ ಇಂದು ದೆಹಲಿ ಡಿಸಿಎಂ ಸಿಸೋಡಿಯಾ ಅವರ ಕಚೇರಿಯಲ್ಲಿ ಯಾವುದೇ ದಾಳಿ ನಡೆಸಿಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಂದ ತನಿಖೆಗೆ ಅನುಮತಿ ಪಡೆದ ನಂತರ ಆಗಸ್ಟ್‌ನಲ್ಲಿ ಸಿಸೋಡಿಯಾ ಅವರ ಮನೆಯನ್ನು ಸಿಬಿಐ ಹಲವು ಬಾರಿ ಶೋಧನೆಗೆ ಒಳಪಡಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!