CINEMA NEWS | ‘ಆದಿಪುರುಷ್​’ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಸೆನ್ಸಾರ್​ ಮಂಡಳಿಗೆ ಕೋರ್ಟ್ ನೊಟೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಭಾಸ್ ನಟನೆಯ ‘ಆದಿಪುರುಷ್​’ ಚಿತ್ರ ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದ್ದು, ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್​ (Saif Ali Khan) ಖಿಲ್ಜಿಯ ರೀತಿ ಕಾಣುತ್ತಾನೆ ಎಂಬ ಆರೋಪಗಳು ಬಂದವು. ಈಗ ಸಿನಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

‘ಆದಿಪುರುಷ್​’ ಚಿತ್ರಕ್ಕೆ ಇದೀಗ ಕಾನೂನು ಸಮರ ಎದುರಾಗಿದ್ದು, ಸೆನ್ಸಾರ್​ ಮಂಡಳಿಗೆ ಕೋರ್ಟ್​ನಿಂದ ನೋಟಿಸ್ ಹೋಗಿದೆ.
ಅಲಹಾಬಾದ್ ಹೈಕೋರ್ಟ್​​ನ ಲಖನೌ ಪೀಠವು ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಸಲ್ಲಿಕೆ ಆದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರಿಸುವಂತೆ ಕೋರ್ಟ್​ ಸೂಚನೆ ನೀಡಿದೆ. ಮುಂದಿನ ಅರ್ಜಿ ವಿಚಾರಣೆ ಫೆಬ್ರವರಿ 21ಕ್ಕೆ ಮುಂದೂಡಲ್ಪಟ್ಟಿದೆ.

ಹಿಂದು ದೇವರಿಗೆ ಅವಮಾನ ಆಗಿದ್ದು, ಸಿನಿಮಾ ಮೇಲೆ ಬ್ಯಾನ್ ಹೇರಬೇಕು ಎಂದು ಈ ಮೊದಲು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿ12ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ವಿಎಫ್​ಎಕ್ಸ್ ಕೆಲಸಗಳು ಪೂರ್ಣಗೊಂಡಿಲ್ಲ ಎನ್ನುವ ಕಾರಣ ನೀಡಿ ಚಿತ್ರದ ರಿಲೀಸ್ ದಿನಾಂಕವನ್ನು ತಂಡ ಮುಂದೂಡಿಕೊಂಡಿದೆ.

ಕುಲ್ದೀಪ್ ತಿವಾರಿ ಎಂಬುವವರು ಅರ್ಜಿ ಸಲ್ಲಿಕೆ ಮಾಡಿದ್ದು, ‘ಸೆನ್ಸಾರ್ ಬೋರ್ಡ್​​ನಿಂದ ಒಪ್ಪಿಗೆ ಪಡೆಯದೇ ಆದಿಪುರುಷ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ನಿಯಮ ಉಲ್ಲಂಘನೆ ಆಗಿದೆ. ಸೀತೆಯ ಪಾತ್ರಕ್ಕೆ ಬೇರೆ ರೀತಿಯ ಉಡುಗೆ ತೊಡಿಸಲಾಗಿದೆ. ರಾವಣನ ಪಾತ್ರ ಕೂಡ ಸರಿಯಾಗಿ ಮೂಡಿ ಬಂದಿಲ್ಲ’ ಎಂದು ಕುಲ್ದೀಪ್ ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!