Tuesday, March 28, 2023

Latest Posts

ಸಿಬಿಎಸ್‌ಇ ಪರೀಕ್ಷೆಯ ಪ್ರವೇಶ ಪತ್ರಗಳಲ್ಲಿ ಭಾರತದ G20 ಪ್ರೆಸಿಡೆನ್ಸಿ ಲೋಗೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12ನೇ ತರಗತಿ ಪರೀಕ್ಷೆಯ ಪ್ರವೇಶ ಪತ್ರಗಳಲ್ಲಿ ಭಾರತದ G20 ಪ್ರೆಸಿಡೆನ್ಸಿ ಲೋಗೋವನ್ನು ಹಾಕಲಾಗಿದೆ. ವಿದ್ಯಾರ್ಥಿಗಳಲ್ಲಿ ಈ ಕುರಿತು ಮಹತ್ವವನ್ನು ಸಾರುವ ಉದ್ದೇಶದಿಂದ ಲೋಗೋ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತವು ಡಿಸೆಂಬರ್‌ನಲ್ಲಿ ಇಂಟರ್‌ಗವರ್ನಮೆಂಟಲ್ ಫೋರಮ್ G-20 ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ ಮತ್ತು ಈ ವರ್ಷ ದೇಶಾದ್ಯಂತ ಅದರ ನಾಯಕರು 200 ಸಭೆಗಳನ್ನು ಆಯೋಜಿಸಲಿದ್ದಾರೆ.

ಸರ್ಕಾರವು ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾರ್ಥಿಗಳಿಗೆ ಅದರ ಮಹತ್ವದ ಬಗ್ಗೆ ತಿಳಿಸಲು ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಕೇಳಿದೆ. ಅದರ ಅನ್ವಯ ಸಿಬಿಎಸ್‌ಇ ಪರೀಕ್ಷೆಯ ಪ್ರವೇಶ ಪತ್ರಗಳಲ್ಲಿ G20 ಪ್ರೆಸಿಡೆನ್ಸಿ ಲೋಗೋ ಅನ್ನು ಮುದ್ರಿಸಲಾಗಿದೆ.

ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳು ಬುಧವಾರ ಪ್ರಾರಂಭವಾಗಿದ್ದು, ಮಾರ್ಚ್ 21 ರವರೆಗೆ ನಡೆಯಲಿದೆ. ದೇಶಾದ್ಯಂತ 750 ಕೇಂದ್ರಗಳಲ್ಲಿ ಮತ್ತು 26 ವಿದೇಶಗಳಲ್ಲಿ 38,83,710 ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!