ಸಿಬಿಎಸ್‌ಇ ಫಲಿತಾಂಶ:‌ ಶೇ 87.33ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ವಿದ್ಯಾರ್ಥಿನಿಯರೇ ಮೇಲುಗೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಶುಕ್ರವಾರ 12ನೇ ತರಗತಿಯ ಫಲಿತಾಂಶ ಪ್ರಕಟ ಮಾಡಿದೆ. ಈ ಬಾರಿ ಶೇಕಡಾ 87.33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೇ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಸಿಬಿಎಸ್ಇ 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 5ರವರೆಗೆ ನಡೆದಿತ್ತು.

ಅತ್ಯುತ್ತಮ ಉತ್ತೀರ್ಣ ಶೇಕಡಾವಾರು ಪ್ರದೇಶ ತಿರುವನಂತಪುರಕ್ಕೆ ಲಭಿಸಿದ್ದು, ಇಲ್ಲಿ ಶೇಕಡಾ 99,91 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 78.05 ರಷ್ಟು ಫಲಿತಾಂಶ ಪಡೆದ ಪ್ರಯಾಗ್ ರಾಜ್ ಕೊನೆಯ ಸ್ಥಾನದಲ್ಲಿದೆ.

ಫಲಿತಾಂಶವನ್ನು ಅಧಿಕೃತ ವೆಬ್‌ ಸೈಟ್‌ ಗಳಾದ http://cbse.nic.in ಮತ್ತು http://cbse.gov.in ನಲ್ಲಿ ಪೋಸ್ಟ್ ಮಾಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿ ಫಲಿತಾಂಶಗವನ್ನು ವೀಕ್ಷಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!