ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಿಂದ ಬಿಡುಗಡೆ ಹೊಂದಿದ್ದು, ಜೈಲಿನಲ್ಲಿ ನನಗೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.
ನಿಧಾನವಾಗಿ ಹೃದಯಾಘಾತವಾಗುವ ಚುಚ್ಚುಮದ್ದಿ ನೀಡಿದ್ದಾರೆ, ವಾಶ್ರೂಂಗೆ ಹೋಗಲೂ ನನಗೆ ಅನುಮತಿ ನೀಡಲಿಲ್ಲ. ನನ್ನನ್ನು ಬಂಧಿಸಿರುವುದು ಕೊಲ್ಲುವ ಉದ್ದೇಶದಿಂದ, ನಿದ್ದೆ ಮಾಡಲು ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಶೌಚಾಲಯ ಹಾಗೂ ಹಾಸಿಗೆ ಇಲ್ಲದ ಕೊಳಕು ಕೋಣೆಯಲ್ಲಿ ಇರಿಸಿ ತಿನ್ನಲು ಏನನ್ನೂ ನೀಡಿಲ್ಲ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಆರೋಪದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಬಂಧಿಸಲಾಗಿತ್ತು.