Thursday, August 11, 2022

Latest Posts

ಸಿಸಿಬಿ ಮಟ್ಕಾ, ಕ್ರಿಕೆಟ್ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ

ದಿಗಂತ ವರದಿ ಮೈಸೂರು:

ಮಟ್ಕಾ ಹಾಗೂ ಕ್ರಿಕೆಟ್ ದಂಧೆಯನ್ನು ನಡೆಸುತ್ತಿದ್ದ ಇಬ್ಬರನ್ನು ಮೈಸೂರಿನ ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 82,290 ರೂ ನಗದು ಹಣ ಹಾಗೂ 2 ಮೊಬೈಲ್ ಫೋನ್‌ಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಗರದ ಸಿ.ಸಿ.ಬಿ. ಪೊಲೀಸರು ಮಾಹಿತಿ ಮೇರೆಗೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ಸರಹದ್ದು ಶಾಂತಿನಗರದ 1ನೇ ಮೇನ್ ಬಿಸ್ಮಿಲ್ಲಾ ಟೀ ಸ್ಟಾಲ್ ಮೇಲೆ ದಾಳಿ ಮಾಡಿ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ, ಮಟ್ಕಾ ಜೂಜಾಟದಿಂದ ಸಂಪಾದಿಸಿದ್ದ 5,490 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅದೇ ರೀತಿ, ಮೈಸೂರು ನಗರದ ನಜರ್‌ಬಾದ್ ಪೊಲೀಸ್ ಠಾಣೆ ಸರಹದ್ದು ಲೋಕರಂಜನ್ ಮಹಲ್ ರಸ್ತೆಯಲ್ಲಿರುವ ಮಾತಾಜಿ ಟೀ ಸ್ಟಾಲ್ ಮೇಲೆ ದಾಳಿ ಮಾಡಿ, ಮೊಬೈಲ್ ಫೋನ್‌ಗಳನ್ನು ಉಪಯೋಗಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಒಬ್ಬ ಆರೋಪಿಯನ್ನು ಬಂಧಿಸಿ, ಆತನ ವಶದಲ್ಲಿದ್ದ 2 ಮೊಬೈಲ್ ಫೋನ್‌ಗಳು ಹಾಗೂ 76,800 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಕಾರ್ಯವನ್ನು ಸಿ.ಸಿ.ಬಿ.ಯ ಎ.ಸಿ.ಪಿ. ಸಿ.ಕೆ.ಅಶ್ವಥನಾರಾಯಣ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್ಪೆಕ್ಟರ್ ಎ.ಮಲ್ಲೇಶ್, ಸಿಬ್ಬಂದಿಗಳಾದ ಆರ್.ರಾಜು, ಜೋಸೆಫ್ ನೊರೋನ್ಹ, ಜನಾರ್ಧನರಾವ್, ಅನಿಲ್, ಅರುಣ್‌ಕುಮಾರ್, ರಘು, ಸುನಿಲ್, ಶ್ರೀನಿವಾಸ್ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss