ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ಮಕ್ಕಳು ಮದ್ಯ, ಡ್ರಗ್ಸ್ ಸೇವಿಸುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ತಡರಾತ್ರಿ ಏಕಕಾಲಕ್ಕೆ 500ಕ್ಕೂ ಹೆಚ್ಚು ಪಬ್, ಹುಕ್ಕಾ ಬಾರ್ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಹೆಚ್ಚಾಗಿ ಅಪ್ರಾಪ್ತರೇ ಇರುವುದು ಕಂಡುಬಂದಿದ್ದು, ಮದ್ಯ ಸೇವಿಸಿ ನಶೆಯಲ್ಲಿ ತೇಲಾಡುತ್ತಿದ್ದರು. ಈ ವೇಳೆ ಕೆಲ ಅಪ್ರಾಪ್ತೆಯರು ನಾವು ಮಾಜಿ ಸಚಿವರ ಕಡೆಯವರು ಎಂದು ವಾಗ್ವಾದಕ್ಕಿಳಿದಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯಿಸಿದ್ದು, ಅನಧಿಕೃತವಾಗಿ ಅಪ್ರಾಪ್ತರಿಗೆ ಧೂಮಪಾನ, ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ದಾಳಿಯನ್ನು ಮಾಡಲಾಗಿದೆ. ಕೆಲವು ಕಡೆ ನಿಯಮ ಉಲ್ಲಂಘನೆಯಾಗಿದೆ. ಜ್ಯೂವನಲ್ ಆಕ್ಟ್ ಅಡಿ ಕೋಪ್ಟಾ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.