ಜಿ-20ಶೃಂಗಸಭೆ: ಪ್ರಧಾನಿ ಮೋದಿಯವರ ಮುಂದಿರುವ ನಾಮಫಲಕದಲ್ಲಿ ‘ಭಾರತ್’ ಹೆಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಿ20 ಶೃಂಗಸಭೆಯ ಮೊದಲ ಅಧಿವೇಶನ ಮೊದಲ ದಿನವೇ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರನ್ನು  ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶೃಂಗಸಭೆಯ ಆತಿಥ್ಯ ವಹಿಸುತ್ತಿರುವ ನಮ್ಮ ದೇಶದ ಪ್ರಧಾನಿಯವರ ಮುಂದೆ ಇದ್ದ ಫಲಕದಲ್ಲಿ ಇಂಡಿಯಾ ಬದಲಿಗೆ ʻಭಾರತ್‌ʼ ಎಂದು ಬರೆದಿರುವುದು ಗಮನ ಸೆಳೆದಿದೆ.

ಇಂಡಿಯಾ ವರ್ಸಸ್‌ ಭಾರತ್‌ ಎಂಬ ಚರ್ಚೆಗಳು ಇರುವ ಬೆನ್ನಲ್ಲೇ ಪ್ರತಿಷ್ಠಿತ ಸಭೆಯಲ್ಲಿ ಪ್ರಧಾನಿ ಮುಂದಿದ್ದ ನಾಮಫಲಕದಲ್ಲಿ ಹೆಸರು ಬದಲಾವಣೆಯಾಗಿರುವುದು ಅಚ್ಚರಿ ಮೂಡಿಸಿದೆ. ಈ ಹಿಂದೆ ಪ್ರಧಾನಿ ಇಂಡೋನೇಷ್ಯಾ ಭೇಟಿ ಸಮಯದಲ್ಲೂ ʻಪ್ರೈಮ್‌ ಮಿನಿಸ್ಟರ್‌ ಆಫ್‌ ಭಾರತ್‌ʼ ಎಂದೇ ಬರೆಯಲಾಗಿತ್ತು.

ಇದರೊಂದಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. 140 ಕೋಟಿ ಜನರು ಭಾರತ್ ಭರವಸೆಯ ಹೊಸ ಹೆಸರು ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!