ಮಂಗಳೂರಿನಲ್ಲಿ ಮಾದಕ ವಸ್ತುಗಳ ಸಹಿತ 12 ವಿದ್ಯಾರ್ಥಿಗಳು ಸಿಸಿಬಿ ಬಲೆಗೆ

ಹೊಸದಿಗಂತ ವರದಿ ಮಂಗಳೂರು:‌ 

ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾವನ್ನು ಹೊಂದಿದ 12 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಬಿ ರವರ ನೇತ್ರತ್ವದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿನ ನಗರದ ವೆಲೆನ್ಸಿಯಾ ಸೂಟರ್ ಪೇಟೆ 3 ನೇ ಕ್ರಾಸ್ ನ ವಸತಿಗೃಹವೊಂದಕ್ಕೆ ದಾಳಿ ನಡೆಸಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿದ ಆರೋಪಿಗಳನ್ನು ಬಂಧಿಸಿದೆ.

ಬಂಧಿತರು ಯಾರ್ಯಾರು?

1. ಶಾನೂಫ್ ಅಬ್ದುಲ್ ಗಫೂರ್ (21), ವಾಸ: ವಿ ವಿ ಹೌಸ್, ಮಾಟೂಲ್ ನಾರ್ತ್, ಮಾಟೂಲ್ ಪೋಸ್ಟ್, ಪಯಂಗಡಿ ಗ್ರಾಮ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ. ಹಾಲಿ ವಾಸ: ಸೂಟರ್ ಪೇಟೆ 3 ನೇ ಅಡ್ಡ ರಸ್ತೆ, ವೆಲೆನ್ಸಿಯಾ, ಮಂಗಳೂರು.

2. ಮೊಹಮ್ಮದ್ ರಸೀನ್(22), ವಾಸ: ಜೈನುಸ್, ಕುರುವ ರೋಡ್, ತಾಯಿಲ್ ಪೋಸ್ಟ್, ಕಣ್ಣೂರು ಜಿಲ್ಲೆ. ಕೇರಳ ರಾಜ್ಯ. ಹಾಲಿ ವಾಸ: ಸೂಟರ್ ಪೇಟೆ 3 ನೇ ಅಡ್ಡ ರಸ್ತೆ, ವೆಲೆನ್ಸಿಯಾ, ಮಂಗಳೂರು.

3. ಗೋಕುಲ ಕೃಷ್ಣನ್(22), ವಾಸ: ಮತ್ತಾನ್ ಕೋಟ್ ಹೌಸ್, ತಮರಾಯೂರ್, ಗುರುವಾಯೂರ್, ಕೇರಳ ರಾಜ್ಯ. ಹಾಲಿ ವಾಸ: ಸೂಟರ್ ಪೇಟೆ 3 ನೇ ಅಡ್ಡ ರಸ್ತೆ, ವೆಲೆನ್ಸಿಯಾ, ಮಂಗಳೂರು.

4. ಶಾರೂನ್ ಆನಂದ(19), ವಾಸ: ಶಾರೂನ್ ನಿವಾಸ್, ತೈಯ್ಯಗಾಲ್, ಪೊದಾವುರ್ ಪೋಸ್ಟ್, ಹೊಸದುರ್ಗ ತಾಲೂಕು, ಕಾಸರಗೋಡು ಜಿಲ್ಲೆ. ಹಾಲಿ ವಾಸ: ಸೂಟರ್ ಪೇಟೆ 3 ನೇ ಅಡ್ಡ ರಸ್ತೆ, ವೆಲೆನ್ಸಿಯಾ, ಮಂಗಳೂರು.

5. ಅನಂತು ಕೆ ಪಿ(18),ವಾಸ: ಕರಿಯಟ್ಟಮೂಲ ಹೌಸ್, ಪಣತೂರ್ ಗ್ರಾಮ, ರಾಜಾಪುರಮ್, ಕಾಸರಗೋಡು ಜಿಲ್ಲೆ. ಹಾಲಿ ವಾಸ: ಸೂಟರ್ ಪೇಟೆ 3 ನೇ ಅಡ್ಡ ರಸ್ತೆ, ವೆಲೆನ್ಸಿಯಾ, ಮಂಗಳೂರು.

6. ಅಮಲ್(21), ವಾಸ: ಪನ್ನೇರಿ ಹೌಸ್, ಪಾಪಿನಾಶೇರಿ ಗ್ರಾಮ, ಕಣ್ಣೂರು, ಕೇರಳ. ಹಾಲಿ ವಾಸ: ಸೂಟರ್ ಪೇಟೆ 3 ನೇ ಅಡ್ಡ ರಸ್ತೆ, ವೆಲೆನ್ಸಿಯಾ, ಮಂಗಳೂರು.

7. ಅಭಿಷೇಕ(21), ವಾಸ: ಸವಿತಾ ನಿವಾಸ,ಇಲ್ಲಿಪುರಮ್,ಪಾಪಿನಾಶೇರಿ ಪೋಸ್ಟ್, ಕಣ್ಣೂರು, ಕೇರಳ. ಹಾಲಿ ವಾಸ: ಅತ್ತಾವರ ಬಬ್ಬು ಸ್ವಾಮಿ ದೈವಸ್ಥಾನದ ಬಳಿ, ಅತ್ತಾವರ, ಮಂಗಳೂರು.

8. ನಿದಾಲ್(21), ವಾಸ: ಸಿ ಕೆ ಹೌಸ್, ಪೆರಂಬಾಶಿ, ಆರ್ಲಂ ಪೋಸ್ಟ್ & ಗ್ರಾಮ, ಇರಿಟ್ಟಿ, ಕಣ್ಣೂರು, ಕೇರಳ. ಹಾಲಿ ವಾಸ: ಶಿವಭಾಗ್ 2 ನೇ ಕ್ರಾಸ್ ರಸ್ತೆ, ಕದ್ರಿ, ಮಂಗಳೂರು.

9. ಶಾಹೀದ್ ಎಂ ಟಿ ಪಿ(22), ವಾಸ: ಶಾಹೀದ್ ಮಹಲ್, ನಾರ್ಥ ಕೊವ್ವಾಲ್, ತ್ರಿಕರಿಪುರ ಅಂಚೆ, ಕಾಸರಗೋಡ ಜಿಲ್ಲೆ. ಹಾಲಿ ವಾಸ: ಶಿವಭಾಗ್ 2 ನೇ ಕ್ರಾಸ್ ರಸ್ತೆ, ಕದ್ರಿ, ಮಂಗಳೂರು.

10. ಫಹಾದ್ ಹಬೀಬ್(22), ವಾಸ: ಗ್ರೌಂಡ್ ಪ್ಲೋರ್, ಲಿಂಕ್ ಪಾರ್ಕ್ ಕ್ರಾಸ್ ರೋಡ್, ಕಲೂರ್ ಕೊಚ್ಚಿ, ಎರ್ನಾಕುಲಮ್, ಕೇರಳ. ಹಾಲಿ ವಾಸ: ಜೈಲ್ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು.

11. ಮೊಹಮ್ಮದ್ ರಿಶಿನ್(22), ವಾಸ: ಆಯೆಷಾ ಮಂಜೀಲ್, ಮಾಡಾವಿ ಅಂಚೆ, ವಾಡಿಕ್ಕಲ್ ಗ್ರಾಮ, ಪಯಂಗಡಿ, ಕಣ್ಣೂರು ಜಿಲ್ಲೆ, ಕೇರಳ. ಹಾಲಿ ವಾಸ: ಶಿವಭಾಗ್ 2 ನೇ ಕ್ರಾಸ್ ರಸ್ತೆ, ಕದ್ರಿ, ಮಂಗಳೂರು.

12. ರಿಜಿನ್ ರಿಯಾಜ್(22), ವಾಸ: ಮಸ್ಕಾನ್ ಹೌಸ್, ಮುಕ್ಕಂ, ಕಕ್ಕಾಡ್ ಗ್ರಾಮ, ಕೋಜಿಕೊಡ್ ಜಿಲ್ಲೆ. ಕೇರಳ. ಹಾಲಿ ವಾಸ: ಶಿವಭಾಗ್ 2 ನೇ ಕ್ರಾಸ್ ರಸ್ತೆ, ಕದ್ರಿ, ಮಂಗಳೂರು.

ಬಂಧಿತರಿಂದ ಒಟ್ಟು 900 ಗ್ರಾಂ ತೂಕದ ರೂ. 20,000 ಮೌಲ್ಯದ ಗಾಂಜಾ, ಗಾಂಜಾವನ್ನು ಸೇದುವ Smoking Pipes, ರೋಲಿಂಗ್ ಪೇಪರ್ ಗಳನ್ನು, ನಗದು ರೂ. 4,500 ಹಾಗೂ 11 ಮೊಬೈಲ್ ಫೋನ್ ಗಳನ್ನು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,85,000 ಎಂದು ಅಂದಾಜಿಸಲಾಗಿದೆ.

ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಯುವಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಗಳನ್ನು ಮಾದಕ ವಸ್ತುಗಳ ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, 11 ಮಂದಿ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿರುತ್ತದೆ. ಆರೋಪಿಗಳ ಪೈಕಿ 9 ಮಂದಿ ವಿದ್ಯಾರ್ಥಿಗಳು ಯೇನೆಪೋಯ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿದ್ದು, 3 ಮಂದಿ ವಿದ್ಯಾರ್ಥಿಗಳು ಇಂದಿರಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿರುತ್ತಾರೆ. ಈ ಬಗ್ಗೆ ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!