ಅಮೆಜಾನ್, ಫ್ಲಿಪ್‌ಕಾರ್ಟ್ ಮಾರಾಟಗಾರ ಮೇಲೆ ಸಿಸಿಐ ದಾಳಿ: ಪ್ರಮುಖ ದಾಖಲೆಗಳು ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆಜಾನ್ ಇಂಕ್ ಮತ್ತು ಫ್ಲಿಪ್ಕಾರ್ಟ್‌ನ ಮಾರುಕಟ್ಟೆಗಳಲ್ಲಿನ ಉನ್ನತ ಮಾರಾಟಗಾರ ಮೇಲೆ ತನಿಖಾಧಿಕಾರಿಗಳು ದಾಳಿ ಮಾಡಿದ್ದು, ದಾಳಿಯಲ್ಲಿ ದತ್ತಾಂಶ ಮತ್ತು ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಅಮೆಜಾನ್ ಪ್ಲಾಟ್ಫಾರ್ಮ್ ಕ್ಲೌಡ್ಟೇಲ್ ಮತ್ತು ಅಪ್ಪಾರಿಯೊದಲ್ಲಿ ಇಬ್ಬರು ಉನ್ನತ ದೇಶೀಯ ಮಾರಾಟಗಾರರು ಮತ್ತು ವಾಲ್ಮಾರ್ಟ್‌ ಫ್ಲಿಪ್ಕಾರ್ಟ್‌ನ ಕೆಲವು ಮಾರಾಟಗಾರರ ಮೇಲೆ ಗುರುವಾರ ಬೆಳಿಗ್ಗೆ ದಾಳಿ ನಡೆಸಲು ಪ್ರಾರಂಭಿಸಿತು.
ಈ ದಾಳಿಗಳು ಜನವರಿ 2020ರಲ್ಲಿ ಸಿಸಿಐ ಆದೇಶಿಸಿದ ತನಿಖೆಗೆ ಸಂಬಂಧಿಸಿದ್ದು, , ಇದರಲ್ಲಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ತಮ್ಮ ವೆಬ್ಸೈಟ್‌ಗಳಲ್ಲಿ ಆದ್ಯತೆಯ ಮಾರಾಟಗಾರರನ್ನ ಉತ್ತೇಜಿಸುವ ಮತ್ತು ಕೆಲವು ಮಾರಾಟಗಾರರ ಪಟ್ಟಿಗಳಿಗೆ ಆದ್ಯತೆ ನೀಡಿದ ಆರೋಪಗಳನ್ನ ಎದುರಿಸುತ್ತಿವೆ.
ಶುಕ್ರವಾರ, ಸಿಸಿಐ ತನಿಖಾಧಿಕಾರಿಗಳು ಮಾರಾಟಗಾರ ಕಂಪನಿಗಳ ಹಲವಾರು ಅಧಿಕಾರಿಗಳನ್ನು ಪ್ರಶ್ನಿಸಿ, ಕಂಪ್ಯೂಟರ್ಗಳಿಂದ ಇಮೇಲ್, ದಾಖಲೆಗಳು ಮತ್ತು ಡೇಟಾವನ್ನ ಸಂಗ್ರಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!