ಪ್ರಜಾಪ್ರಭುತ್ವ ಹಬ್ಬವನ್ನು GOOGLE ಡೂಡಲ್​ ಮೂಲಕ​ ಆಚರಣೆ: ಏನಿದರ ವಿಶೇಷತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಇಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು. ಈ ಪ್ರಜಾಪ್ರಭುತ್ವದ ಹಬ್ಬವನ್ನು ಗೂಗಲ್ ವಿಶೇಷವಾಗಿ ಡೂಡಲ್ ಮೂಲಕ ಆಚರಿಸಿತು.

ಗೂಗಲ್‌ನಲ್ಲಿ “O” ಅಕ್ಷರದ ಜಾಗದಲ್ಲಿ ಶಾಯಿ ಹಚ್ಚಿರುವ ಕೈ ಬೆರಳನ್ನು ಹಾಕುವುದರಿಂದ ಪ್ರಪಂಚದಾದ್ಯಂತದ ಜನರಿಗೆ ಪ್ರಜಾಪ್ರಭುತ್ವದ ಶ್ರೇಷ್ಠ ಆಚರಣೆಯನ್ನು ಪರಿಚಯಿಸುತ್ತಿದೆ.

ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ, ಸುಮಾರು 8.4 ಮಿಲಿಯನ್ ಪುರುಷರು ಮತ್ತು 8.23 ​​ಮಿಲಿಯನ್ ಮಹಿಳೆಯರು ಸೇರಿದಂತೆ 16.63 ಮಿಲಿಯನ್ ಮತದಾರರು ಇಂದು ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಗೂಗಲ್‌ನಲ್ಲಿ ಈ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ, ಗೂಗಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಲೋಕಸಭೆ ಚುನಾವಣೆ ಸುದ್ದಿಯನ್ನು ನೋಡುತ್ತೀರಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!