WEIGHT LOSS | ತೂಕ ಇಳಿಸೋಕೆ ಸಮ್ಮರ್‌ ಬೆಸ್ಟ್‌ ಟೈಮ್‌, ಯಾಕಂತೀರಾ??

ಮಳೆ ಹಾಗೂ ಚಳಿಗಾಲಕ್ಕೆ ಹೋಲಿಸಿದರೆ ಬೇಸಿಗೆಯಲ್ಲಿ ತೂಕ ಇಳಿಸೋದು ಬೆಸ್ಟ್‌, ಈ ಕಾಲದಲ್ಲಿ ತೂಕ ಇಳಿಸಿದ್ರೆ ಬೇಗನೇ ತೂಕ ಇಳಿಯುತ್ತದೆ ಹಾಗೂ ಇಳಿದ ತೂಕದಿಂದ ಇನ್ನಷ್ಟು ಮೋಟಿವೇಟ್‌ ಆಗಿ ವರ್ಕೌಂಟ್‌ ಹೆಚ್ಚು ಮಾಡುತ್ತೀರಿ. ಬೇಸಿಗೆಯಲ್ಲಿ ತೂಕ ಇಳಿಸೋದು ಯಾಕೆ ಸುಲಭ?

ಹೆಚ್ಚು ನೀರು ಕುಡಿಯೋದು ತೂಕ  ಇಳಿಕೆಗೆ ಬೆಸ್ಟ್‌, ಸಮ್ಮರ್‌ನಲ್ಲಿ ನೈಸರ್ಗಿಕವಾಗಿ ನೀರು ಬೇಕು ಎನಿಸುತ್ತದೆ.ಹಾಗೆ ಬೆವರು ಕೂಡ ಜಾಸ್ತಿ.

ಬೇಸಿಗೆಯಲ್ಲಿ ಜಂಕ್‌ ಫುಡ್‌ ಮೇಲೆ ಆಸೆ ಆಗೋದಿಲ್ಲ. ಸೆಖೆಗೆ ನೀರು, ಮಜ್ಜಿಗೆ, ಜ್ಯೂಸ್‌ ಮಾತ್ರ ಇಷ್ಟ ಆಗುತ್ತದೆ. ಹೆಚ್ಚು ಮಸಾಲಾ ಪದಾರ್ಥಗಳು ಇಷ್ಟ ಆಗೋದಿಲ್ಲ.

ಬಿಸಿ ವಾತಾವರಣದಿಂದಾಗಿ ಊಟ ಕರಗೋದು ನಿಧಾನ ಹಾಗಾಗಿ ತುಂಬಾ ಸಮಯದವರೆಗೂ ಹೊಟ್ಟೆ ತುಂಬಿದಂತೆ ಇರುತ್ತದೆ.

ಈ ಸೀಸನ್‌ನಲ್ಲಿ ಆಕರ್ಷಕವಾಗುವಂಥ ಎಷ್ಟೊಂದು ಹಣ್ಣು ತರಕಾರಿಗಳು ಫ್ರೆಶ್‌ ಆಗಿ ಸಿಗುತ್ತವೆ. ಅದನ್ನು ತಿನ್ನೋಕೆ ಹೆಚ್ಚಿನ ಜನ ಇಷ್ಟಪಡುತ್ತಾರೆ.

ಔಟ್‌ಡೋರ್‌ ಆಕ್ಟಿವಿಟಿಗಳನ್ನು ಮಾಡುತ್ತಲೇ ಇರುತ್ತೀರಿ, ಬಿಸಿಲಿನಿಂದ ಎನರ್ಜಿ ಕೂಡ ಹೆಚ್ಚು ಇರುತ್ತದೆ.

ವಾಕಿಂಗ್‌ ಹಾಗೂ ಜಾಗಿಂಗ್‌ಗೆ ಬೆಸ್ಟ್‌ ಸಮಯ. ಚಳಿಯಲ್ಲಿ ಏಳೋಕಾಗಲ್ಲ, ಮಳೆಯಲ್ಲಿ ಹೊರಗೆ ಬರೋಕಾಗಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!