Saturday, December 9, 2023

Latest Posts

ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ದಿಗಂತ ವರದಿ ಮೈಸೂರು:

ನಗರದ ಬಿಜೆಪಿ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣ ವನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಗೋಪಾಲ್ ರಾವ್ ನೇರವೇರಿಸಿದರು. ನಂತರ ಮಾತನಾಡಿ, 1950 ಜನವರಿ 26 ರಂದು ಅಂಬೇಡ್ಕರ್ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೆ ತಂದ ಹೆಮ್ಮೆಯ ದಿನ.

ಹಲವು ಪ್ರಾದೇಶಿಕ ರಾಜ್ಯಗಳನ್ನು ಸೇರಿಸಿ ಒಕ್ಕೂಟ ವ್ಯವಸ್ಥೆಯೋಂದಿಗೆ ವಿಲೀನ ಮಾಡುವ ಮೂಲಕ ಇಡಿ ದೇಶಕ್ಕೆ ಒಂದೇ ಸಂವಿಧಾನವನ್ನು ಜಾರಿಗೊಳಿಸಿದ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.‌ ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತನಾಡಿ, ಇದೊಂದು ರಾಷ್ಟ್ರೀಯ ಹಬ್ಬ .ಕಾಶ್ಮೀರ ದಿಂದ ಕನ್ಯಾಕುಮಾರಿ ಯವರೆಗೆ ಇಡೀ ದೇಶ ಸಂಭ್ರಮಿಸುವ ರಾಷ್ಟ್ರೀಯ ಹಬ್ಬ . ಹಾಗಾಗಿ ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ನೆನಪು ಮಾಡಿಕೊಳ್ಳುವ ಮೂಲಕ, ಅವರ ಆದರ್ಶವನ್ನು ನಮ್ಮೆಲ್ಲಾ ಕಾರ್ಯಕರ್ತರು ಅಳವಡಿಸಿ ಕೊಳ್ಳೊಣ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.,ಗಿರೀಧರ್, ಡಾ.ಕೆ ವಸಂತ ಕುಮಾರ್, ಶಿವಕುಮಾರ್ , ಜೋಗಿ ಮಂಜು,ಜಯರಾಮ್, ಶ್ರೀನಿವಾಸ್ , ಗೋಕುಲ್ ಗೋವರ್ಧನ್, ಲಕನ್ ನಾಯಕ್,ಹೇಮಾ ನಂದಿಶ್,ಹೇಮಾ ಗಂಗಪ್ಪ, ಗೋಪಾಲ್, ಭರತ್,ಶಿವರಾಜ್,ರವಿ, ಚಂದ್ರಪ್ಪ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!