ನ್ಯೂಜಿಲೆಂಡ್‌ ವಿರುದ್ಧ ಟೀಮ್ ಇಂಡಿಯಾಗೆ ಸರಣಿ ಗೆಲುವಿನ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದೋರ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ಅನ್ನು ಭಾರತ 90 ರನ್‌ಗಳಿಂದ ಸೋಲಿಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಹೋಳ್ಕರ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 9 ವಿಕೆಟ್‌ಗೆ 385 ರನ್‌ ಪೇರಿಸಿತ್ತು.
ನ್ಯೂಜಿಲೆಂಡ್‌ ತಂಡ ಡೆವೋನ್‌ ಕಾನ್ವೆ ಬಾರಿಸಿದ ಶತಕದ ಮೂಲಕ ಪ್ರತಿರೋಧ ತೋರಿತಾದರೂ 41.2 ಓವರ್‌ಗಳಲ್ಲಿ 295 ರನ್‌ಗೆ ಆಲೌಟ್‌ ಆಯಿತು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭರ್ಜರಿ ವಿಜಯ ಕಂಡಿರುವ ಭಾರತ ಈಗ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಜನವರಿ 27, 29 ಹಾಗೂ ಫೆ.1ಕ್ಕೆ ಪಂದ್ಯ ನಿಗದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!