Monday, January 30, 2023

Latest Posts

ಮರಳಿ ಇಲ್ಲಿಗೆ ಬಂದಿದ್ದಕ್ಕೆ ಖುಷಿ ಆಗುತ್ತಿದೆ: ಟ್ವಿಟರ್​ ಅಂಗಳಕ್ಕೆ ಮತ್ತೆ ಕಂಗನಾ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಾದಗಳಿಂದಲೇ ತಮ್ಮ ಟ್ವಿಟರ್ ಖಾತೆ ಕಳೆದುಕೊಂಡ ಬಾಲಿವುಡ್ ನಟಿ ಕಂಗನಾ ರಣಾವತ್​ (Kangana Ranaut) ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಮತ್ತೆ ಟ್ವಿಟರ್​ಗೆ ಮರಳಿದ್ದಾರೆ.

ಈ ಕುರಿತು ಮಂಗಳವಾರ (ಜ.24) ಅವರು ಮಾಹಿತಿ ನೀಡಿದ್ದಾರೆ.

ಆಕ್ಷೇಪಾರ್ಹ ಟ್ವೀಟ್​ ಮಾಡಿದ ಕಾರಣಕ್ಕೆ 20 ತಿಂಗಳ ಹಿಂದೆ ಅವರ ಖಾತೆಯನ್ನು ಸಸ್ಪೆಂಡ್​ ಮಾಡಲಾಗಿತ್ತು. ಆದರೆ ಈಗ ಅವರು ಪುನಃ ಟ್ವಿಟರ್​ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ಅವರು ಸಂತಸ ಹಂಚಿಕೊಂಡಿದ್ದು, ‘ಮರಳಿ ಇಲ್ಲಿಗೆ ಬಂದಿದ್ದಕ್ಕೆ ಖುಷಿ ಆಗುತ್ತಿದೆ’ ಎಂದು ಟ್ವೀಟ್​ (Kangana Ranaut Tweet)​ ಮಾಡಿದ್ದಾರೆ. ಅಭಿಮಾನಿಗಳು ಕಮೆಂಟ್​ಗಳ ಮೂಲಕ ನೆಚ್ಚಿನ ನಟಿಗೆ ಸ್ವಾಗತ ಕೋರುತ್ತಿದ್ದಾರೆ.

 

ಟ್ವಿಟರ್​ಗೆ ಮರಳಿ ಬಂದಿರುವ ಕಂಗನಾಅವರು ತಮ್ಮ ಮುಂಬರುವ ಸಿನಿಮಾ ‘ಎಮರ್ಜೆನ್ಸಿ’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್​ ಮುಗಿದಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!