ದೀಪಾವಳಿ ಹಬ್ಬದ ಸಂಭ್ರಮ: ವೋಕಲ್‌ ಫಾರ್‌ ಲೋಕಲ್‌ ಅಭಿಯಾನಕ್ಕೆ ಕೈ ಜೋಡಿಸಿದ ಗಣ್ಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶಾದ್ಯಂತ ದೀಪಾವಳಿ ಹಬ್ಬದ (Deepavali 2023) ಸಂಭ್ರಮ. ಜನರು ಪಟಾಕಿ, ಹಣತೆ, ಹಲವು ವಸ್ತುಗಳನ್ನು ಖರೀದಿಸುವಲ್ಲಿ ಬ್ಯುಸಿ. ಈ ವೇಳೆ ‘ದೇಶದ ಜನರು ದೇಶೀಯ ವಸ್ತುಗಳನ್ನೇ ಖರೀದಿಸಿ. ವೋಕಲ್‌ ಫಾರ್‌ ಲೋಕಲ್‌ (Vocal For Local) ಎಂಬ ಅಭಿಯಾನಕ್ಕೆ ಬೆಂಬಲ ನೀಡಿ’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕರೆ ನೀಡಿದ್ದು, ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.

ದೇಶದ ನಾಗರಿಕರು, ಬಾಲಿವುಡ್‌ ನಟ-ನಟಿಯರು, ಉದ್ಯಮಿಗಳು ಸೇರಿ ಹತ್ತಾರು ಗಣ್ಯರು ಅಭಿಯಾನಕ್ಕೆ ಕೈ ಜೋಡಿಸಿದ್ದು, ದೇಶೀಯ ವಸ್ತುಗಳನ್ನೇ ಖರೀದಿಸುತ್ತಿದ್ದಾರೆ.

ಕಿರಣ್‌ ಮಜುಂದಾರ್‌ ಷಾ
ಬಯೋಕಾನ್‌ ಸಂಸ್ಥೆ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ ಅವರು ವೋಕಲ್‌ ಫಾರ್‌ ಲೋಕಲ್‌ ಅಭಿಯಾನಕ್ಕೆ ಬೆಂಬಲ ಘೋಷಿಸಿದ್ದಾರೆ. ‘ವೋಕಲ್‌ ಫಾರ್‌ ಲೋಕಲ್‌ ಅಭಿಯಾನದಿಂದಾಗಿ ಸೃಜನಶೀಲ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇಂತಹ ಅಭಿಯಾನ ಆರಂಭಿಸಿದ ಮೋದಿ ಅವರಿಗೆ ಧನ್ಯವಾದಗಳು. ದೇಶೀಯ ಉದ್ಯಮಿಗಳು, ವ್ಯಾಪಾರಿಗಳು ಲಕ್ಷ್ಮೀ ಕೃಪಾಕಟಾಕ್ಷದಿಂದ ಉತ್ತಮ ಲಾಭ ಗಳಿಸಲಿ’ ಎಂದು ಪೋಸ್ಟ್‌ ಮಾಡಿದ್ದಾರೆ.

https://twitter.com/kiranshaw/status/1722652397854716178?ref_src=twsrc%5Etfw%7Ctwcamp%5Etweetembed%7Ctwterm%5E1722652397854716178%7Ctwgr%5E2bcb8b284d78a132dd68c4881804b26311e00e9a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fvistaranews-epaper-vistaran%2Flatest-updates-latest%3Fmode%3Dpwaaction%3Dclick

ಅಕ್ಷಯ್‌ ಕುಮಾರ್‌
‘ವಿದೇಶದಲ್ಲಿ ಶೂಟಿಂಗ್‌ನಲ್ಲಿರುವ ಕಾರಣ ನಮ್ಮ ಕಚೇರಿಯಲ್ಲಿ ನಡೆಯುವ ಧನತ್ರಯೋದಶಿ ಪೂಜೆಯಲ್ಲಿ ಭಾಗವಹಿಸಲು ಆಗಲಿಲ್ಲ. ಆದರೆ, ನಮ್ಮ ತಂಡದ ಸದಸ್ಯರು ದೇಶೀಯ ಕಲಾವಿದರ ಮೂಸೆಯಿಂದ ಹೊರಬಂದಿರುವ ಅದ್ಭುತ ಕಲಾಕೃತಿಗಳು, ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು’ ಎಂದು ಅಕ್ಷಯ್‌ ಕುಮಾರ್‌ ಪೋಸ್ಟ್‌ ಮಾಡಿದ್ದಾರೆ.

https://twitter.com/akshaykumar/status/1722940637316567299?ref_src=twsrc%5Etfw%7Ctwcamp%5Etweetembed%7Ctwterm%5E1722940637316567299%7Ctwgr%5E2bcb8b284d78a132dd68c4881804b26311e00e9a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fvistaranews-epaper-vistaran%2Flatest-updates-latest%3Fmode%3Dpwaaction%3Dclick

ಭೂಮಿ ಪೆಡ್ನೇಕರ್‌ ಸಾಥ್‌
ವೋಕಲ್‌ ಫಾರ್‌ ಲೋಕಲ್‌ ಅಭಿಯಾನಕ್ಕೆ ಬಾಲಿವುಡ್‌ ನಟಿ ಭೂಮಿ ಪೆಡ್ನೇಕರ್‌ ಅವರು ಕೂಡ ಸಾಥ್‌ ನೀಡಿದ್ದಾರೆ ‘ಭಾರತದ ಕರಕುಶಲ ಕಲೆಯು ಜಗತ್ತಿನಲ್ಲೇ ಅದ್ಭುತವಾಗಿದೆ. ನಾವು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸೋಣ, ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಹಾಗೂ ನರೇಂದ್ರ ಮೋದಿ ಅವರ ಕರೆಗೆ ಬೆಂಬಲ ನೀಡೋಣ. ಅವರು ದೇಶಾದ್ಯಂತ ಖುಷಿ ಹಂಚುತ್ತಿದ್ದು, ನಾವು ಕೂಡ ಭಾಗಿಯಾಗೋಣ’ ಎಂದು ಹೇಳಿದ್ದಾರೆ.

https://twitter.com/bhumipednekar/status/1722946883298152905?ref_src=twsrc%5Etfw%7Ctwcamp%5Etweetembed%7Ctwterm%5E1722946883298152905%7Ctwgr%5E2bcb8b284d78a132dd68c4881804b26311e00e9a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fvistaranews-epaper-vistaran%2Flatest-updates-latest%3Fmode%3Dpwaaction%3Dclick

ಬಾಲಿವುಡ್‌ ನಟರಾದ ಜಾಕಿ ಶ್ರಾಫ್‌, ಅನುಪಮ್‌ ಖೇರ್‌, ವರುಣ್‌ ಶರ್ಮಾ, ರೂಪಾಲಿ ಗಂಗೂಲಿ, ಗೌರವ್‌ ಖನ್ನಾ, ಉದ್ಯಮಿ ಗೌರವ್‌ ಚೌಧರಿ ಇನ್ನೂ ಹಲವು ಗಣ್ಯರು ದೇಶೀಯ ಉತ್ಪನ್ನಗಳ ಖರೀದಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!