September 10, 2026
Thursday, September 10, 2026
spot_img

ಶತದಿನದ ಸಂಭ್ರಮ: ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದ ಕಲಬುರಗಿ ಮಿನಿ ವಿಧಾನಸೌಧ, ಜಗತ್ ವೃತ್ತ

ಸರ್ಕಾರಕ್ಕೆ ಶತದಿನದ ಕಲಬುರಗಿ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ರಾಜ್ಯ ಸರ್ಕಾರ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಮಿನಿ ವಿಧಾನ ಸೌಧ ಕಟ್ಟಡ ಮತ್ತು ಜಗತ್ ವೃತ್ತಗಳು‌ ಗುರುವಾರ ಸಂಜೆ ಹಳದಿ, ಕೆಂಪು ಬಣ್ಣದ ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದವು.

ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ ಇಲಾಖೆಯಿಂದ ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು,‌ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಸಂಜೆ ಹೊತ್ತಿನಲ್ಲಿ ಝಗಮಗಿಸುವ ವಿದ್ಯುತ್ ದೀಪದಲ್ಲಿ ಜಿಲ್ಲಾಡಳಿತ ಕಟ್ಟಡ ಮತ್ತು ಜಗತ್ ವೃತ್ತ ನೋಡುಗರ ಗಮನ ಸೆಳೆಯಲಿದೆ.

ಶತ ದಿನದ ಸಂಭ್ರಮದಲ್ಲಿರುವ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಜೊತೆಗೆ ನಾಡಿನ ರೈತರ, ಯುವಕರ, ವಿದ್ಯಾರ್ಥಿಗಳ, ಮಹಿಳೆಯರ ಸರ್ವಾಂಗೀಣ ಏಳಿಗೆಗೆ ಪ್ರಗತಿಯ ರಥವನ್ನು ಮುಂದುವರೆಸಿದೆ. ನಾಡಿನ ಆಶಕಿರಣವಾಗಿರುವ ಪ್ರಜಾ ಸೇವಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಸರ್ಕಾರ ನವ ಭಾರತ ನಿರ್ಮಾಣಕ್ಕೆ ಯುವ ಕರ್ನಾಟಕ ನಿರ್ಮಿಸುವ ದೃಢ ಸಂಕಲ್ಪ ಹೊಂದಿದೆ.

ಇದನ್ನೂ ಓದಿ:

ಬೃಹತ್ ಎಲ್.ಇ.ಡಿ. ಪರದೆ ಅಳವಡಿಕೆ:

ಇನ್ನು ಜಗತ್ ವೃತ್ತದಲ್ಲಿ ಎರಡು ಬೃಹತ್ ಎಲ್.ಇ.ಡಿ. ಪರದೆ‌ ಅಳವಡಿಕೆ ಅಳವಡಿಸಿದ್ದು, ಇದರಲ್ಲಿ ಕಳೆದ 100 ದಿನದಲ್ಲಿ ನೂತನ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ನಿಧಿ, ವಿದ್ಯಾರ್ಥಿ ಉಚಿತ ಬಸ್ ಪಾಸ್, ಭೂ ಗ್ಯಾರಂಟಿ, ಭಾರತ ಜೋಡೋ ಸಂಘ ರಚನೆ, ಟೆಲಿ‌ ಮೆಡಿಸಿನ್, ಆರೋಗ್ಯ ಸ್ಪಂದನ, ಅಪರೇಷನ್ ರೈಸ್ ಬೇಡ ಬ್ರೋ ಅಭಿಯಾನ, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಶೇ.7.50 ರಷ್ಟು ಮೀಸಲಾತಿ, ಪ್ರಜಾ ಸೇವೆ ಅಭಿಯಾನ, ಬೆಂಗಳೂರುದಾಚೆ ಟೈರ್ -2 ಮತ್ತು ಟೈರ್-3 ನಗರಗಳಲ್ಲಿ ಆರ್ಥಿಕ ಬೆಳವಣಿಗೆಗೆ ಲೀಪ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !