ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಬಲ ಬೆಳೆ, ಪಿಂಚಣಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಕರ್ನಾಟಕದ 75 ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಎಂ ಸಿದ್ದರಾಮಯ್ಯು ಇದೆಲ್ಲಾ ಕೇಂದ್ರ ಸರ್ಕಾರದ್ದೇ ಕೆಲಸ ಎಂದು ಹೇಳಿದ್ದಾರೆ. ಮಧ್ಯಪ್ರದೇಶ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ. ಎಲ್ಲ ರೈತರನ್ನು ಬಿಡುಗಡೆ ಮಾಡಬೇಕು, ಅವರ ಇಷ್ಟದಂತೆ ಪ್ರತಿಭಟಿಸಲು ಅವಕಾಶ್ ಕೊಡಬೇಕು. ಇವರನ್ನು ಬಂಧಿಸಿರುವುದು ಮಧ್ಯ ಪ್ರದೇಶ ಸರ್ಕಾರವೇ ಇರಬಹುದು. ಆದರೆ ಇದರ ಹಿಂದಿರುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ. ಈ ರೀತಿ ಕ್ರಿಮನಲ್ ಮೆದುಳು ಕೇಂದ್ರ ಸರ್ಕಾರದ್ದೇ ಹೊರತು ಇನ್ಯಾರದ್ದೂ ಅಲ್ಲ ಎಂದಿದ್ದಾರೆ.