ಹೊಸದಿಗಂತ ವರದಿ, ಬಳ್ಳಾರಿ:
ಕೇಂದ್ರದ ಇಡಿ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ ಮೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ನಡರದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು. ಕೇಂದ್ರದ ಇಡಿ ಇಲಾಖೆ ಬಿಜೆಪಿಯ ಕೈಗೊಂಬೆಯಾಗಿದೆ, ನಾನಾ ಸುಳ್ಳು ಕೇಸ್ ಗಳನ್ನು ಫಿಟ್ ಮಾಡಿ ಕೈನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ. ನನ್ನ ಮೇಲೂ ಇಡಿ, ಎಸಿಬಿ, ಸಿಐಡಿ ಸೇರಿದಂತೆ ನಾನಾ ಇಲಾಖೆಗಳು 10ಕ್ಕೂ ಹೆಚ್ಚು ಸುಳ್ಳು ಕೇಸ್ ಗಳನ್ನು ಜಡಿದಿದ್ದಾರೆ, ಕೇಂದ್ರದ ನಾನಾ ಪ್ರಮುಖ ಇಲಾಖೆಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ, ಇದು ಸರಿಯಲ್ಲ, ದ್ವೇಷದ ರಾಜಕಾರಣ ಎಂದಿಗೂ ಫಲ ನೀಡೋಲ್ಲ, ಅಧಿಕಾರ ದುರ್ಬಳಕೆ ಸಾಮಾನ್ಯವಾಗಿದ್ದು, ಬಿಜೆಪಿ ಅವರಿಗೆ ಅಂತ್ಯಕಾಲ ಬಂದಿದೆ ಎಂದು ವಾಗ್ದಾಳಿ ನಡೆಸಿದರು. ದೊಡ್ಡಬಳ್ಳಾಪುರ ದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಿ.ಎಂ.ಬೊಮ್ಮಾಯಿ ವೀರಾವೇಷದ ಮಾತುಗಳನ್ನು ಆಡಿದ್ದಾರೆ, ತಪ್ಪು ಯಾರೇ ಮಾಡಿರಲಿ ತನಿಖೆಯಾಗಲಿ, ನಾವು ತಯಾರಿದ್ದೇವೆ, ಬಿಜೆಪಿ ಅವರಂತೆ ಬ್ರಷ್ಟಾಚಾರಿಗಳು ನಾವಲ್ಲ, ಬಿಜೆಪಿ ಅಧಿಕಾರಕ್ಕೆ ಬಂದು 3 ಕಳೆದಿದೆ, ಇಲ್ಲಿವರೆಗೂ ಏನ್ ಮಾಡಿದ್ರು, ಚುನಾವಣೆ ಸಂದರ್ಭದಲ್ಲಿ ನೆನಪಾಯ್ತಾ ಎಂದು ಪ್ರಶ್ನಿಸಿದರು. ಗಾಂಧಿ ಕುಟುಂಬಕ್ಕೆ ಮಸಿಬಳಿಯುವ ಯತ್ನ ನಡೆದಿದೆ, ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಸುಖಾಸುಮ್ಮನೇ ಅವರನ್ನು ಎಳೆಯಲಾಗಿದೆ, ನಾವಲ್ಲ ದೇಶದ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ರಾಹುಲ್ ಗಾಂಧಿ ಅವರು ಪ್ರಾರಂಭಿಸಿರುವ ಪಾದಯಾತ್ರೆ, ಬಳ್ಳಾರಿ ಗೆ ಪ್ರವೇಶಿಸಲಿದೆ, ಸೋನಿಯಾ ಗಾಂದಿ ಅವರಿಗೆ ಶಕ್ತಿ ಕೊಟ್ಟ ಜಿಲ್ಲೆ ಬಳ್ಳಾರಿಯನ್ನು ಅವರು ಮರೆತಿಲ್ಲ, ರಾಹುಲ್ ಗಾಂಧಿ ಅವರು, ಬಳ್ಳಾರಿಯಲ್ಲೇ ಬಹಿರಂಗ ಸಭೆ ನಡೆಸಿ ಡಬಲ್ ಎಂಜಿನ್ ಸರ್ಕಾರದ ದುರಾಡಳಿತವನ್ನು ಬಯಲಿಗೆಲೆಯಲಿದ್ದಾರೆ, ಈ ಕುರಿತು ಸ್ಥಳ ವಿಕ್ಷಣೆಗೆ ಆಗಮಿಸಿದ್ದೇವೆ, ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿ.ವಿ.ಶಿವಯೊಗಿ, ಬಿ.ಕೆ.ಹರಿಪ್ರಸಾದ್, ಸಲಿಂ ಅಹ್ಮದ್, ಎಲ್.ಹನುಮಂತಯ್ಯ, ಶಾಸಕರಾದ ಬಿ.ನಾಗೇಂದ್ರ, ಈ.ತುಕಾರಾಂ, ಮಾಜಿ ಸಚಿವ ಎಂ.ದಿವಾಕರ್ ಬಾಬು, ಸಂಸದ ಡಾ.ನಾಸೀರ್ ಹುಸೇನ್, ರಾಜ್ಯ ಕಾರ್ಯದರ್ಶಿ ಜೆ.ಎಸ್.ಆಂಜಿನೇಯಲು, ವಿ.ಎಸ್.ಉಗ್ರಪ್ಪ, ಮುಂಡರಗಿ ನಾಗರಾಜ್, ಭರತ್ ರೆಡ್ಡಿ, ಅಲ್ಲಂ ವಿರಭದ್ರಪ್ಪ, ಬಿ.ಎಂ.ನಾಗರಾಜ್, ಇತರರಿದ್ದರು.