Thursday, July 7, 2022

Latest Posts

ಮಾನವ ಕೂದಲಿನ ರಫ್ತಿನ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕೇಂದ್ರ ಸರ್ಕಾರ ಮಾನವ ಕೂದಲಿನ ರಫ್ತಿನ ಮೇಲೆ ಮಂಗಳವಾರ ನಿರ್ಬಂಧಗಳನ್ನು ಹೇರಿದೆ. ಈ ಮೂಲಕ ಭಾರತದಿಂದ ಕೂದಲಿನ ಕಳ್ಳಸಾಗಣೆ ತಡೆಯಲು ಸಹಾಯವಾಗುತ್ತದೆ ಎಂದು ಕೂದಲು ಉದ್ಯಮ ತಿಳಿಸಿದೆ.
ಮಾನವ ಕೂದಲಿನ ರಫ್ತು ನೀತಿ, ತೊಳೆದಿರಲಿ ಅಥವಾ ತೊಳೆಯದಿರಲಿ ಕೂದಲಿನ ತ್ಯಾಜ್ಯ ಅಥವಾ ಇತರ ಯಾವುದೇ ರೀತಿಯ ಕಚ್ಚಾ ಮಾನವ ಕೂದಲಿನ ರಫ್ತು ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿರ್ಬಂಧಿತ ವರ್ಗಕ್ಕೆ ಸೇರಿಸಲಾಗಿದೆಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶಕ(ಡಿಜಿಎಫ್‌ಟಿ) ಸಂತೋಷ್ ಕುಮಾರ್ ಸಾರಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರದ ಈ ಕ್ರಮವನ್ನು ಮಾನವ ಕೂದಲು ಮತ್ತು ಕೂದಲಿನ ಉತ್ಪನ್ನಗಳ ತಯಾರಕರು ಮತ್ತು ರಫ್ತುದಾರರ ಸಂಘದ ಸದಸ್ಯ ಸುನಿಲ್ ಎಮಾನಿ ಸ್ವಾಗತಿಸಿದೆ.
ಭಾರತದಲ್ಲಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಜೊತೆಗೆ ಪಶ್ಚಿಮ ಬಂಗಾಳವು ಮಾನವ ಕೂದಲು ಉದ್ಯಮದ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿಂದ ಮ್ಯಾನ್ಮಾರ್ ಮತ್ತು ಚೀನಾದಂತಹ ದೇಶಗಳಿಗೆ ಕಚ್ಚಾ ಮಾನವ ಕೂದಲನ್ನು ಕಳ್ಳಸಾಗಣೆ ಮೂಲಕ ಸಾಗುತ್ತಿತ್ತು.ಇದರಿಂದ ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತುಗಳಿಗೆ ಹಾನಿಯಾಗುತ್ತಿದೆ. ಆದ್ರೆ ಈಗ ಈ ನಿರ್ಬಂಧದಿಂದ, ನಿಜವಾದ ರಫ್ತುದಾರರು ಮಾತ್ರ ಉತ್ಪನ್ನವನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ ಎಂದು ಎಮಾನಿ ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss