ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ 2022ನೇ ಸಾಲಿನ ಪರಮ ವಿಶಿಷ್ಠ ಸೇವಾ ಪದಕವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಬಾರಿ ಈ ಪ್ರಶಸ್ತಿಯನ್ನು 29 ಮಂದಿಗೆ ನೀಡಲಾಗುತ್ತಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 73ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ನೀಡಲಾಗುವ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಇತರರಿಗೆ 384 ಶೌರ್ಯ ಪ್ರಶಸ್ತಿ ಹಾಗು ಇತರ ಪ್ರಶಸ್ತಿಗಳೊಂದಿಗೆ ಗೌರವಿಸಲಿದ್ದಾರೆ.ಪ್ರಶಸ್ತಿಗಳಲ್ಲಿ 12 ಶೌರ್ಯ ಚಕ್ರಗಳು, 29 ಪರಂ ವಿಶಿಷ್ಟ ಸೇವಾ ಪದಕಗಳು. ಇದರ ಮುಂದುವರಿದ ಭಾಗವಾಗಿ ನಾಲ್ಕು ಉತ್ತಮ ಯುದ್ಧ ಸೇವಾ ಪದಕಗಳು, 53 ಅತಿ ವಿಶಿಷ್ಟ ಸೇವಾ ಪದಕಗಳು, 13 ಯುದ್ಧ ಸೇವಾ ಪದಕಗಳನ್ನು ನೀಡಲಾಗುತ್ತಿದೆ.
ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಜಾವ್ಲಿನ್ ಥ್ರೋ ಮೂಲಕ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ.