ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಮೇಲೆ 2 ರೂಪಾಯಿ ದರ ಏರಿಕೆ ಮಾಡಿದೆ.
ಹೊಸ ಬೆಲೆಗಳು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಆದರೆ, ಕೇಂದ್ರ ಸರ್ಕಾರ ಮಾಡಿರುವ ಈ ಬೆಲೆ ಏರಿಕೆ ಗ್ರಾಹಕನ ಮೇಲೆ ಪರಿಣಾಮ ಬೀರೋದಿಲ್ಲ.
ಪ್ರಸ್ತುತ, ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.90 ರೂ. ಮತ್ತು ಡೀಸೆಲ್ ಮೇಲೆ 15.80 ರೂ. ಅಬಕಾರಿ ಸುಂಕವನ್ನು ಸಂಗ್ರಹ ಮಾಡುತ್ತಿತ್ತು. ಈ ಹೆಚ್ಚಳದ ನಂತರ, ಪೆಟ್ರೋಲ್ ಮೇಲಿನ ಸುಂಕವು ಲೀಟರ್‌ಗೆ 21.90 ರೂ. ಮತ್ತು ಡೀಸೆಲ್ ಮೇಲೆ 17.80 ರೂಪಾಯಿ ಆಗಲಿದೆ.
ದೆಹಲಿಯಲ್ಲಿ, ಪ್ರಸ್ತುತ ಪೆಟ್ರೋಲ್ ಅನ್ನು ಲೀಟರ್‌ಗೆ 94 ರೂ. ಮತ್ತು ಡೀಸೆಲ್ ಅನ್ನು ಲೀಟರ್‌ಗೆ 87 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಹೆಚ್ಚಳದೊಂದಿಗೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಮತ್ತು ಸೆಸ್ ಕೂಡ ಹೆಚ್ಚಾಗುತ್ತದೆ. ಇದರ ಆಧಾರದ ಮೇಲೆ ಹೊಸ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿರುವುದರಿಂದ ಹೊಸ ಅಬಕಾರಿ ಸುಂಕವನ್ನು ಅದರಲ್ಲಿ ಹೊಂದಾಣಿಕೆ ಮಾಡಲಿದೆ. ಹೀಗಾಗಿ ಗ್ರಾಹಕನ ಮೇಲೆ ಪರಿಣಾಮ ಬೀರೋದಿಲ್ಲ.