ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇಂಧನ ಸಚಿವಾಲಯವು ಚಾರ್ಜಿಂಗ್ ಕೇಂದ್ರ ಮೂಲಸೌಕರ್ಯಕ್ಕೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿ ಅನ್ವಯ, ವಿದ್ಯುತ್ ಚಾಲಿತ ವಾಹನ ಇರುವವರು ತಮ್ಮ ಮನೆ, ಕಚೇರಿಗಳಲ್ಲಿನ ವಿದ್ಯುತ್ ಬಳಸಿ ವಾಹನ ಚಾರ್ಜ್ ಮಾಡಬಹುದು.
ಪರವಾನಗಿ ಇಲ್ಲದಿದ್ದರೂ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಅವಕಾಶ. ಆದರೆ ಚಾರ್ಜಿಂಗ್ ಕೇಂದ್ರಗಳಲ್ಲಿ ತಾಂತ್ರಿಕ ಸುರಕ್ಷತೆ, ಗುಣಮಟ್ಟ ಹಾಗೂ ನಿಯಮಗಳನ್ನು ಅನುಸರಿಸಬೇಕು.
ಸರ್ಕಾರಿ ಸಂಸ್ಥೆಗಳ ಸ್ಥಾಳದಲ್ಲಿ ಲಭ್ಯವಿರುವ ಜಾಗದಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಬಹುದು. ಜಾರ್ಜಿಂಗ್ ಕೇಂದ್ರ ಸ್ಥಾಪಿಸಿದ ಮಾಲಿಕರು ಪ್ರತಿ ಕಿಲೋವ್ಯಾಟ್ ಗೆ 1 ರೂ. ನಂತೆ ಸರ್ಕಾರಕ್ಕೆ ತಿಂಗಳಿಗೊಮ್ಮೆ ಹಣ ಪಾವತಿಸಬೇಕು.
ಒಪ್ಪಂದವನ್ನು ಆರಂಭಿಕ ಹಂತದಲ್ಲಿ 10 ವರ್ಷಗಳ ಅವಧಿಗೆ ನೀಡಲಾಗುತ್ತದೆ. ನಗರ ಪ್ರದೇಶಗಳಿಗೆ 7 ದಿನಗಳಲ್ಲಿ ಹಾಗೂ ಇತರೆ ಸ್ಥಳಿಯಾಡಳಿತಕ್ಕೆ 15 ದಿನಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 30 ದಿನಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತದೆ.
ರಾಜ್ಯ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ದೊಡ್ಡ ನಗರಗಳಲ್ಲಿ ಈ ಚಾರ್ಜಿಂಗ್ ಕೇಂದ್ರ ಸ್ಥಾಪಿಸಬಹುದಾಗಿದ್ದು, ಪ್ರಮುಖ ಹೆದ್ದಾರಿಗಳ ವ್ಯಾಪ್ತಿಯನ್ನು ಪಡೆಯುವುದು ಮುಖ್ಯವಾಗಿದೆ.