ದೇಶೀಯ ಕಚ್ಚಾತೈಲದ ದಿಢೀರ್‌ ಲಾಭದ ಮೇಲಿನ ತೆರಿಗೆ ಕಡಿತಗೊಳಿಸಿದ ಕೇಂದ್ರ ಸರ್ಕಾರ: ಡಿಸೇಲ್‌ ರಫ್ತಿನ ತೆರಿಗೆಯಲ್ಲಿ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಡೀಸೆಲ್ ರಫ್ತಿನ ಮೇಲಿನ ದಿಢೀರ್ ಲಾಭದ ತೆರಿಗೆಯನ್ನು ಗುರುವಾರ  ಸರ್ಕಾರವು ಪ್ರತಿ ಲೀಟರ್‌ಗೆ 5 ರೂ.ನಿಂದ 7 ರೂ.ಗೆ ಹೆಚ್ಚಿಸಿದೆ. ದೇಶೀಯ ಕಚ್ಚಾತೈಲದ ಮೇಲೆ ಹೇರಲಾಗಿದ್ದ ದಿಢೀರ್‌ ಲಾಭದ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರವು ಕಡಿತಗೊಳಿಸಿದೆ. ‌

ತನ್ನ ಮೂರನೇ ಪಾಕ್ಷಿಕ ಪರಾಮರ್ಶೆ ಸಭೆಯಲ್ಲಿ ಸರ್ಕಾರವು ಡೀಸೆಲ್ ರಫ್ತಿನ ಮೇಲಿನ ದಿಢೀರ್‌ ಲಾಭ ತೆರಿಗೆಯನ್ನು ಲೀಟರ್‌ಗೆ 5 ರೂ.ಗಳಿಂದ 7 ರೂ.ಗೆ ಹೆಚ್ಚಿಸಿದೆ ಮತ್ತು ಜೆಟ್‌ ಇಂಧನಗಳ ಮೇಲೆ ಲೀಟರ್‌ಗೆ ರೂ.2 ತೆರಿಗೆಯನ್ನು ಜಾರಿ ಮಾಡಿದೆ. ಹೊಸ ಬದಲಾವಣೆಗಳು ಆಗಸ್ಟ್ 19 ರಿಂದ ಜಾರಿಗೆ ಬರಲಿವೆ.

ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ), ತನ್ನ ಅಧಿಸೂಚನೆಯಲ್ಲಿ, ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ದಿಢೀರ್‌ ಲಾಭ ತೆರಿಗೆಯನ್ನು  ಟನ್‌ಗೆ 17,750 ರೂ.ಗಳಿಂದ 13,000 ರೂ.ಗೆ ಇಳಿಸಿದೆ, ಇದು ONGC, ವೇದಾಂತದಂತಹ ಉತ್ಪಾದಕರಿಗೆ ಅನುಕೂಲವಾಗಲಿದೆ. ಜಾಗತಿಕ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಜಾಗತಿಕ ತೈಲ ಬೆಲೆಗಳು ಏರಿರುವುದರಿಂದ ದೇಶೀಯ ಕಂಪನಿಗಳು ಭಾರಿ ಲಾಭವನ್ನು ಗಳಿಸುತ್ತಿರುವ ಹಿನ್ನೆಯಲ್ಲಿ ಈ ಹೊಸ ತೆರಿಗೆಯನ್ನು ಜಾರಿಗೆ ತರಲಾಗಿದೆ.

ಮಧ್ಯೆ ಜಾಗತಿಕ ತೈಲ ಬೆಲೆಗಳು ಏರಿದ ನಂತರ ದೇಶೀಯ ಕಂಪನಿಗಳು ಭಾರಿ ಲಾಭವನ್ನು ಗಳಿಸುತ್ತಿರುವುದನ್ನು ನೋಡಿದ ನಂತರ ಹೊಸ ತೆರಿಗೆಯನ್ನು ವಿಧಿಸಲಾಗಿದೆ. ಸರಕುಗಳ ಬೆಲೆಗಳ ಏರಿಕೆ ಮತ್ತು ದುರ್ಬಲ ರೂಪಾಯಿಯು ದೇಶದ ಆಮದು ಪ್ರಮಾಣವನ್ನು ಹಚ್ಚಿಸಿದೆ. ಇದರಿಂದ ಜುಲೈನಲ್ಲಿ ಭಾರತದ ವ್ಯಾಪಾರದ ಅಂತರವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದರಿಂದ ಈ ತಿಂಗಳ ಆರಂಭದಲ್ಲಿ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!