ಬಾದಾಮಿ ಯುವಕನಿಂದ ಇ-ಬೈಸಿಕಲ್ ಆವಿಷ್ಕಾರ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಟ್ಟಣದ ಯುವಕರಿಂದ ಮೇಕ್ ಇನ್ ಇಂಡಿಯಾಗೆ ಪೂರಕವಾಗಿ ಇ-ಬೈಸಿಕಲ್ ಆವಿಷ್ಕರಿಸಿದ್ದಾರೆ. ಬಾದಾಮಿಯಲ್ಲಿ ಮಂಜುನಾಥ ಜಲಗೇರಿ ಹಾಗೂ ಇಕ್ಬಾಲ್ ಅವರು ಇ-ಬೈಸಿಕಲ್ ಅನ್ನು ಮೇಕ್ ಇನ್ ಇಂಡಿಯಾಗೆ ಪೂರಕವಾಗಿ ಆವಿಷ್ಕರಿಸಿದ್ದಾರೆ.

ಇ-ಬೈಸಿಕಲ್ ನ್ನು 75ನೇ ಸ್ವಾತಂತ್ರೋತ್ಸವ ನಿಮಿತ್ತ ಕಳೆದ ಸೋಮವಾರ ಬಿಡುಗಡೆಗೊಳಿಸಿದ್ದಾರೆ. ಇಲೆಕ್ಟ್ರಿಕಲ್ ಬೈಕ್ ಕಂಡು ಜನತೆ ಆಶ್ಚರ್ಯ ಚಕಿತರಾದರು. ಬೈಕನ್ನು ಚಲಾಯಿಸಿ ಬೈಕ್ ತಯಾಸಿದವರಿಗೆ ಶಹಬ್ಬಾಸ್ ಹೇಳಿದರು. ಇ-ಬೈಸಿಕಲ್ ವಿಶೇಷತೆಗಳೆನೆಂದರೆ ವಯೋವೃದ್ಧರಿಗಾಗಿ ತಯಾರು ಮಾಡಲಾಗಿದ್ದು, ಕನಿಷ್ಠ 2 ತಾಸು ಚಾರ್ಜ್ ಮಾಡಿದರೆ 40 ಕಿಮಿ ಚಲಿಸುತ್ತದೆ. ಗರಿಷ್ಠ 30 ಕಿಮಿ ವೇಗದಲ್ಲಿ ಹೋಗುತ್ತದೆ. ಬೈಕ್ ವೆಚ್ಚ ಅಂದಾಜು 35 ಸಾವಿರ ರೂಪಾಯಿ ಆಗಿದ್ದು, ಸಾರ್ವಜನಿಕರಲ್ಲೀಗ ಕುತೂಹಲಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!