ಜಿಲ್ಲೆಯ ಅತಿವೃಷ್ಠಿ ಅಧ್ಯಯನಕ್ಕೆ ಕೇಂದ್ರ ತಂಡದ ಭೇಟಿ: ಬೆಳೆಹಾನಿ ಜಮೀನು, ಕೆರೆ ವೀಕ್ಷಣೆ

ಹೊಸದಿಗಂತ ವರದಿ ಹಾವೇರಿ: 

ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿ ಅಧ್ಯಯನಕ್ಕೆ ಆಗಮಿಸಿರುವ ಅಶೋಕ ಕುಮಾರ ನೇತೃತ್ವದ ಅಧ್ಯಯನ ತಂಡ ಬೆಳಿಗ್ಗೆ ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿನ ಬೆಳೆ ಹಾನಿ ವೀಕ್ಷಣೆ ಮಾಡಿದರು. ಗ್ರಾಮದ ನಾಗಪ್ಪ ಪೂಜಾರ ಎನ್ನುವವರ ಹೊಲದಲ್ಲಿನ ಹತ್ತಿ ಬೆಳೆಯನ್ನು ವೀಕ್ಷಿಸಿದ ತಂಡ. ಹತ್ತಿ ಬಿತ್ತನೆ ಮಾಡಿ ಎಷ್ಟು ದಿನವಾಯಿತು. ಎಷ್ಟು ವೆಚ್ಚ ಮಾಡಿದ್ದೀರಿ. ಮುಂದಿನ ಬೆಳೆ ಬೆಳೆಯುವದಕ್ಕೆ ಜಮೀನನ್ನು ತಯಾರು ಮಾಡುವುದಕ್ಕೆ ಎಷ್ಟು ದಿನ ಬೇಕಾಗುತ್ತದೆ. ಎಂದು ರೈತ ನಾಗಪ್ಪ ಪೂಜಾರ ಅವರನ್ನು ಕೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಮಂಜುನಾಥ. ಭೂಮಿಯಲ್ಲಿನ ತೇವಾಂಶ ಕಡಿಮೆ ಆಗುವುದಕ್ಕೆ ಕನಿಷ್ಠ 2-3 ತಿಂಗಳಾದರೂ ಬೇಕಾಗುತ್ತದೆ. ಹೀಗೆ ಮಳೆ ಮುಂದುವರೆದರೆ ಬಿತ್ತನೆ ಕಾರ್ಯಕ್ಕೆ ಇನ್ನು ಕೆಲ ದಿನಗಳು ಮುಂದೆ ಹೋಗಬಹುದು ಎಂದು ತಿಳಿಸಿದರು.

ರೈತನ ಗೋಳಾಟ

ರೈತನಾ ಬಾಳೇವ್ ನೋಡ್ರಿ, ಎರಡ್ಮೂರು ಬಾರಿ ಬಿತ್ತನೆ ಮಾಡೇವ್ರಿ ಆದರೂ ಬೆಳೆ ಬರದಂಗ ಆಗೇತ್ರಿ. ಅತಿ ಮಳಿಗೆ ರೈತನ ಬಾಳೇವ್ ಮುರಾಬಟ್ಟೆ ಆಗೇತ್ರಿ. ತಿನ್ನಾಕ್ ಕೂಳಿಲ್ಲ, ದನಕರಕ್ಕೆ ಮೇವಿಲ್ಲ. ಏನಾರ ರೈತನಿಗೆ ಸಹಾಯ ಮಾಡ್ರಿ. ಎಂದು ಅಧ್ಯತನ ತಂಡದ ಎದಿರು ಕಣ್ಣೀರು ಹಾಕಿದ ರೈತ ಪೂಜಾರ.

ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿನ ಬಿರುಕುಬಿಟ್ಟ ಕೆರೆ ವೀಕ್ಷಣೆ ಮಾಡಿದ ತಂಡಕ್ಕೆ. ಈ ಕೆರೆ ಕಳೆದ ಎರಡು ವರ್ಷಗಳ ಹಿಂದೆಯೇ ಬಿರುಕು ಬಿಟ್ಟಿದ್ದು. ಇದಕ್ಕೊಂದು ಶಾಶ್ವತ ಪರಿಹಾರ ದೊರಕುವಂತೆ ಮಾಡುವಂತೆ ತಂಡದ ಎದುರು ಗ್ರಾಮಸ್ಥರು ಕೇಳಿಕೊಂಡರು.
ಕೆರೆ ಒಡೆದರೆ ಸಾವಿರಾರು ಎಕರೆಯಲ್ಲಿ ಬೆಳೆ ನಾಶವಾಗುತ್ತದೆ. ಕೆಳಭಾಗದಲ್ಲಿನ ಅನೇಕ ಕೆರೆಗಳು ಒಡೆಯುವ ಸಾಧ್ಯತೆ ಇದೆ ಹೀಗಾಗಿ ಈ ಕೆರೆಯನ್ನು ಭದ್ರ ಪಡಿಸುವಂತೆ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!