ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಘಟಿಕೋತ್ಸವ: ಉತ್ತಮ ಜನ, ಜಾನುವಾರು ಸೇವೆ ನೀಡಲು ರಾಜ್ಯಪಾಲರ ಕರೆ

ಹೊಸದಿಗಂತ ವರದಿ,ಬೀದರ್ :

ಉತ್ತಮ ರೀತಿಯಲ್ಲಿ ಜನ ಹಾಗೂ ಜಾನುವಾರು ಸೇವೆ ನೀಡಲು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರನಲ್ಲಿ ಏಪ್ರಿಲ್ 28 ರಂದು ವಿಶ್ವವಿದ್ಯಾಲಯದ ಕೇಂದ್ರದಲ್ಲಿ ನಡೆದ 12ನೇ ಘಟಿಕೋತ್ಸವ ದಿನದಂದು 328 ಪದವೀಧರರಿಗೆ ಪದವಿ ಪ್ರಧಾನ ಮಾಡಿ ಅವರು ಮಾತನಾಡಿದರು.
ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ಇಡೀ ದೇಶದಲ್ಲಿ 5ನೇ ಸ್ಥಾನದಲ್ಲಿರುವುದು ನಿಜಕ್ಕೂ ಅಭಿನಂದನೀಯ ಸಂಗತಿ ಎಂದ ರಾಜ್ಯಪಾಲರು, ಹಾಲು ಉತ್ಪಾದನೆಯಲ್ಲಿ ರಾಜ್ಯವು ಇನ್ನು ಹೆಚ್ಚಿನ ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ದೊಡ್ಡ ಪ್ರಾಣಿಗಳಾದ ಆಕಳು, ಎಮ್ಮೆಗಳಿಂದ ಬರುವಂತಹ ಹಾಲು ಉತ್ಪಾದನೆ ಅಲ್ಲದೇ ಕುರಿ ಮತ್ತು ಆಕಳುಗಳ ಸಾಕಣೆಗೆ ಕೂಡ ಒತ್ತು ಕೊಟ್ಟು ಅದರಿಂದ ಲಾಭದ ಪ್ರಯೋಜನೆ ಪಡೆಯುವಂತೆ ವಿದ್ಯಾರ್ಥಿಗಳಿಗೆ ಮತ್ತು ವಿಶ್ವವಿದ್ಯಾಲಯಕ್ಕೆ ಅವರು ಸಲಹೆ ಮಾಡಿದರು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಸ್ಟಾರ್ಟ ಅಪ್ ಇಂಡಿಯಾ ಮತ್ತು ಎಂಟರ ಪ್ರೈನರ್ ಉದ್ಯಮಗಳಿಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡುವಂತೆ ವಿಶ್ವ ವಿದ್ಯಾಲಯಗಳು ಸ್ಪಂದಿಸಬೇಕು ಎಂದು ಕರೆಯಿತ್ತರು.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷÀತ್ತಿನ ಉಪ ಮಹಾನಿರ್ದೇಶಕರಾದ ಡಾ.ಬಿ.ಎನ್. ತ್ರಿಪಾಠಿ ಅವರು ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಸಮಾರಂಭದಲ್ಲಿ ಪಶು ಸಂಗೋಪನೆ ಹಾಗೂ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಪ್ರಭು ಚವ್ಹಾಣ್, ಶಾಸಕರಾದ ರಹೀಂ ಖಾನ್, ಬಂಡೆಪ್ಪ ಖಾಶೆಂಪೂರ, ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಸಿ.ವೀರಣ್ಣ, ಕುಲಸಚಿವರಾದ ಪ್ರೊ.ಬಿ.ವಿ.ಶಿವಪ್ರಕಾಶ, ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಣಾಧಿಕಾರಿಗಳಾದ ಜಹೀರಾ ನಸಿಮ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಕಿಶೋರ್ ಬಾಬು ಡಿ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ವ್ಯವಸ್ಥಾಪಕ ಮಂಡಳಿ ಮತ್ತು ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರುಗಳು ಹಾಗೂ ಇನ್ನೀತರರು ಉಪಸ್ಥಿತರಿದ್ದರು.
735 ಸ್ನಾತಕ ಪದವೀಧರರು, 215 ಸ್ನಾತಕೋತ್ತರ ಹಾಗೂ 62 ಡಾಕ್ಟರೇಟ್ ಪದವೀಧರರು ಸೇರಿ ಒಟ್ಟು 1012 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!