ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ವಿಚ್ಛೇದನದ ಬಗ್ಗೆ ಬಿಸಿಬಿಸಿ ಚರ್ಚೆಯಾಗ್ತಿದೆ.
ಇದರ ಚಹಲ್ ಹಾಗೂ ಧನಶ್ರೀ ಮಧ್ಯೆ ಬಂದಿದ್ದು ಕೋರಿಯೋಗ್ರಫರ್ ಪ್ರತೀಕ್ ಉಟೇಕರ್ ಎನ್ನಲಾಗ್ತಿದೆ. ಧನಶ್ರೀ ಹಾಗೂ ಪ್ರತೀಕ್ ಜೊತೆಗಿರುವ ಫೋಟೋ ಒಂದು ವೈರಲ್ ಆಗಿದೆ.
ಇನ್ನು ಚಹಲ್ ಮತ್ತು ಧನಶ್ರೀ ವರ್ಮಾ, ಡಿವೋರ್ಸ್ ಬಗ್ಗೆ ಈವರೆಗೂ ಮೌನ ಮುರಿದಿಲ್ಲ. ಆದ್ರೆ ಪ್ರತೀಕ್, ಸೋಶಿಯಲ್ ಮೀಡಿಯಾ ಮೂಲಕ ಟ್ರೋಲರ್ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದ್ದಾರೆ.
ಪ್ರತೀಕ್, ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಧನಶ್ರೀ ಹೆಸರನ್ನೂ ಪ್ರತೀಕ್ ಬರೆದಿಲ್ಲ. ಆದ್ರೆ ವೈರಲ್ ಆಗಿರುವ ಒಂದು ಫೋಟೋ ಬಗ್ಗೆ ಅವರು ಸ್ಟೋರಿ ಹಾಕಿದ್ದಾರೆ.
ಕೇವಲ ಒಂದು ಫೋಟೋ ನೋಡಿ, ಮನಸ್ಸಿಗೆ ಬಂದ ಕಥೆ ಬರೆಯಲು ಹಾಗೂ ಕಮೆಂಟ್ ಮಾಡಲು ವಿಶ್ವ ಖಾಲಿ ಇದೆ, ಜನರು ಫ್ರೀ ಇದ್ದಾರೆ ಎಂದು ಪ್ರತೀಕ್ ಸ್ಟೋರಿ ಹಾಕಿದ್ದಾರೆ. ಆದ್ರೆ ಈ ವಿಷ್ಯಕ್ಕೂ ಪ್ರತೀಕ್ ಟ್ರೋಲ್ ಆಗಿದ್ದಾರೆ. ಇಷ್ಟೊಂದು ಸುದ್ದಿ ಹರಡುವವರೆಗೂ ಪ್ರತೀಕ್ ಏಕೆ ಸುಮ್ಮನಿದ್ರು ಅಂತ ಪ್ರಶ್ನೆ ಮಾಡಿದ್ದಾರೆ.
ಫೋಟೋದಲ್ಲಿ ಏನಿದೆ?
ಪ್ರತೀಕ್ ಹಾಗೂ ಧನಶ್ರೀ ಅತೀ ಹತ್ತಿರದಲ್ಲಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.ಇಬ್ಬರು ಬಹಳ ಹತ್ತಿರದಿಂದ ಫೋಟೋಕ್ಕೆ ಪೋಸ್ ನೀಡಿದ್ದಾರೆ. ಇದು ಹಳೆಯ ಫೋಟೋ. ಹಿಂದಿನ ವರ್ಷವೇ ಈ ಫೋಟೋ ವೈರಲ್ ಆಗಿತ್ತು. ಆ ಸಮಯದಲ್ಲಿ ಪ್ರತೀಕ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆಗ ಧನಶ್ರೀ ಮಾತನಾಡಿದ್ದರು. ಒಂದು ಫೋಟೋ ನನ್ನ ಕುಟುಂಬ ಹಾಗೂ ಆಪ್ತ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ. ನಾನು ಇದಕ್ಕೆ ಹೆದರುವುದಿಲ್ಲ. ಎದ್ದು ನಿಲ್ಲುತ್ತೇನೆ ಎಂದಿದ್ದರು.
ಆದ್ರೀಗ ಮತ್ತೆ ಹಳೇ ಫೋಟೋ ಚರ್ಚೆಗೆ ಬಂದಿದೆ. ಅವರಿಬ್ಬರ ಮಧ್ಯೆ ಇರುವ ಬಾಂಡಿಂಗ್ ನೋಡಿದ ಟ್ರೋಲರ್, ಧನಶ್ರೀ ಹೆಸರಿಗೆ ಪ್ರತೀಕ್ ಹೆಸರನ್ನು ಥಳುಕು ಹಾಕಿದ್ದಾರೆ.