March 24, 2026
Tuesday, March 24, 2026
spot_img

ಇಸ್ರೇಲ್–ಇರಾನ್ ಉದ್ವಿಗ್ನತೆ ಮಧ್ಯೆ ಎಕ್ಸ್ ನಲ್ಲಿ ಬೆಂಕಿ ಹೊತ್ತಿಸಿದ ಚಾಹಲ್ ಟ್ವೀಟ್: ಏನಿದೆ ಆ ಪೋಸ್ಟ್ ನಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಹಾಗೂ ಇರಾನ್ ನಡುವೆ ಉದ್ವಿಗ್ನತೆ ತೀವ್ರವಾಗುತ್ತಿರುವ ಹೊತ್ತಿನಲ್ಲಿ ಭಾರತೀಯ ಕ್ರಿಕೆಟರ್ ಯುಜ್ವೇಂದ್ರ ಚಾಹಲ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.

ಯುದ್ಧದ ಹಿನ್ನೆಲೆ ವಿವಿಧ ದೇಶಗಳಿಗೆ ಬೆಂಬಲ ವ್ಯಕ್ತವಾಗುತ್ತಿರುವಾಗ, ಚಾಹಲ್ ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶವಿರುವ ಟಿ-ಶರ್ಟ್ ಧರಿಸಿದ ವ್ಯಕ್ತಿಯ ಫೋಟೋ ಹಂಚಿಕೊಂಡಿದ್ದಾರೆ.

ಆ ಟಿ-ಶರ್ಟ್ ಮೇಲೆ “ನೀವು ವಾಸಿಸುವ ದೇಶವನ್ನು ಬೆಂಬಲಿಸಿ ಅಥವಾ ನೀವು ಬೆಂಬಲಿಸುವ ದೇಶದಲ್ಲೇ ವಾಸಿಸಿ” ಎಂಬ ಬರಹ ಕಾಣಿಸಿಕೊಂಡಿದೆ. ಈ ಪೋಸ್ಟ್ ಬಳಿಕ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಕೆಲವರು ಬೆಂಬಲಿಸಿದರೆ ಇನ್ನೂ ಕೆಲವರು ಟೀಕೆ ಮಾಡಿದ್ದಾರೆ. ಒಟ್ಟಾರೆ ಯುದ್ಧದ ಮಧ್ಯೆ ಚಾಹಲ್ ಟ್ವೀಟ್ ವೈರಲ್ ಆಗ್ತಿದೆ.

ಇದನ್ನೂ ಓದಿ:

ಇದೀಗ 35 ವರ್ಷದ ಚಾಹಲ್ ಹಲವು ಸಮಯದಿಂದ ರಾಷ್ಟ್ರೀಯ ತಂಡದಿಂದ ದೂರವಾಗಿದ್ದಾರೆ. 2023ರಲ್ಲಿ ಅವರು ಭಾರತ ಪರ ಕೊನೆಯ ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದ್ದರು. 2024ರ ಟಿ20 ವಿಶ್ವಕಪ್ ತಂಡದಲ್ಲಿ ಇದ್ದರೂ, ಆಡುವ ಹನ್ನೊಂದರಲ್ಲಿ ಅವಕಾಶ ಸಿಗಲಿಲ್ಲ.

ವೃತ್ತಿಜೀವನದಲ್ಲಿ ಚಾಹಲ್ 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್ ಹಾಗೂ 80 ಟಿ20 ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಾರೆ. ಅವರ ಇತ್ತೀಚಿನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !