ಚಾಯ್‌ವಾಲಿ ಪದವೀಧರೆ ದುಃಖಕ್ಕೆ ಸ್ಪಂದಿಸಿದ ಸೋನು ಸೂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪದವಿ ಪಡೆದಿದ್ದರೂ ಉದ್ಯೋಗ ಸಿಗದೇ ಟೀ ಅಂಗಡಿ ಹಾಕಿಕೊಂಡಿದ್ದ ಯುವತಿಯೊಬ್ಬರ ಟೀ ಅಂಗಡಿಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಮುತ್ತಿಗೆ ಹಾಕಿದ್ದರು. ಬಿಟೆಕ್ ಚಾಯ್‌ವಾಲಿ ಪ್ರಿಯಾಂಕಾ ಗುಪ್ತಾ ಅವರು ಈ ವಿಷಯ ಹೇಳಿಕೊಂಡು ಕಣ್ಣೀರಿಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದಕ್ಕೆ ಬಾಲಿವುಡ್ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದು, ಹೊಸತಾಗಿ ಟೀ ಅಂಗಡಿ ತೆರೆಯಲು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಶಿಘ್ರದಲ್ಲೇ ಟೀ ಅಂಗಡಿ ಆರಂಭವಾಗುವ ಸಾಧ್ಯತೆ ಇದೆ.

ಸೋನು ನಿಗಮ್ ಕಷ್ಟದಲ್ಲಿರುವ ಎಲ್ಲರಿಗೆ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ಪ್ರಿಯಾಂಕ ಕಷ್ಟಕ್ಕೆ ಸ್ಪಂದಿಸಿದ್ದು, ಪ್ರಿಯಾಂಕ ಅಂಗಡಿಯಲ್ಲಿ ಟೀ ಕುಡಿದ ಎಲ್ಲರೂ ಸೋನು ನಡೆಗೆ ಭೇಷ್ ಎಂದಿದ್ದಾರೆ.

ಪ್ರಿಯಾಂಕ ಟೀ ಶಾಪ್‌ಗೆ ವ್ಯವಸ್ಥೆ ಮಾಡಿದ್ದೇನೆ. ಯಾರೂ ಅವರ ಅಂಗಡಿಯನ್ನು ಎತ್ತಂಗಡಿ ಮಾಡಿಸೋದಿಲ್ಲ. ನಾನೇ ಬಂದು ಟೀ ಕುಡಿಯುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!