ತೆಲುಗು ಪೋಷಕ ನಟ ಚಲಪತಿ ರಾವ್ ನಿಧನ: ಶೋಕದಲ್ಲಿ ಟಾಲಿವುಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್‌ಗೆ ಮತ್ತೊಂದು ಆಘಾತ ಉಂಟಾಗಿದೆ. ಹಿರಿಯ ನಟ ಚಲಪತಿ ರಾವ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಖಳನಟನಾಗಿ, ಹಾಸ್ಯನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸಿದ್ದ ಚಲಪತಿ ರಾವ್ ನಿಧನದ ಸುದ್ದಿ ಕೇಳಿ ಚಿತ್ರರಂಗ ಕಂಬನಿ ಮಿಡಿದಿದೆ. 1200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಚಲಪತಿ ರಾವ್ ನಿರ್ಮಾಪಕರಾಗಿಯೂ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಹಿರಿಯ ಎನ್‌ಟಿಆರ್ ನಿಂದ ಹಿಡಿದು ಜೂನಿಯರ್ ಎನ್ಟಿಆರ್ ವರೆಗೆ ಎಲ್ಲರೊಂದಿಗೂ ತೆರೆ ಹಂಚಿಕೊಂಡಿರುವ ಚಲಪತಿ ರಾವ್ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಚಲಪತಿ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅನಾರೋಗ್ಯದಿಂದ ಕೆಲ ದಿನಗಳಿಂದ ಪುತ್ರ ರವಿಬಾಬು ಅವರ ಮನೆಯಲ್ಲಿದ್ದ ಚಲಪತಿ ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಚಲಪತಿಯವರ ಮಗಳು ಅಮೇರಿಕಾದಲ್ಲಿದ್ದಾಳೆ. ಬುಧವಾರ ಹೈದರಾಬಾದ್ ತಲುಪಲಿದ್ದಾರೆ. ಅಲ್ಲಿಯವರೆಗೂ ಚಲಪತಿ ರಾವ್ ಅವರ ಪಾರ್ಥಿವ ಶರೀರವನ್ನು ಜುಬ್ಲಿ ಹಿಲ್ಸ್ ಮಹಾಪ್ರಸ್ಥಾನದ ಫ್ರೀಜರ್ ನಲ್ಲಿ ಇಡಲಾಗುವುದು. ಕುಟುಂಬ ಸದಸ್ಯರು, ಸ್ನೇಹಿತರು, ಚಿತ್ರರಂಗದ ಗಣ್ಯರು, ಅಭಿಮಾನಿಗಳಿಗಾಗಿ ಇಂದು ಮಧ್ಯಾಹ್ನದವರೆಗೂ ಮನೆಯಲ್ಲಿಯೇ ಪಾರ್ಥಿವ ಶರೀರ ದರ್ಶನಕ್ಕಾಗಿ ಇಡಲಿದ್ದಾರೆ. ಚಲಪತಿ ಪುತ್ರಿ ಆಗಮಿಸಿದ ಬಳಿಕ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!