ಕುಕ್ಕರ್‌ ಸ್ಪೋಟ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಹೇಳಿಕೆ ಖಂಡನೀಯ: ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕುಕ್ಕರ್‌ ಸ್ಪೋಟ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಅತ್ಯಂತ ಖಂಡನೀಯವಾದದ್ದು. ದು ಅತ್ಯಂತ ಹಾಸ್ಯಾಸ್ಪದ ಹೇಳಿಕೆ ಎಂದು ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು. ಕುಕ್ಕರ್ ಒಲೆ ಮೇಲೆ ಇಟ್ಟಾಗ ಸ್ಫೋಟವಾಗಿಲ್ಲ, ಅದರೊಳಗೆ ಬಾಂಬ್ ಇತ್ತಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಟೆರರಿಸ್ಟ್ ಎಂದೊಡನೆ ನಿಮಗ್ಯಾಕೆ ನೋವಾಗಿದೆ? ಅಂದರೆ ನೀವು ಟೆರರಿಸ್ಟ್ ಪರ ಇದ್ದಂತಲ್ಲವೇ ಎಂದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯನ್ನು ತೆಗಳುವ ಭರದಲ್ಲಿ ಭಯೋತ್ಪಾದಕರ ಪರವಾಗಿ ಮಾತನಾಡಿದ್ದನ್ನು ಬಿಜೆಪಿ ಖಂಡಿಸುತ್ತದೆ. ನಮಗೆ ದೇಶ ದೊಡ್ಡದೇ ಹೊರತು ಭಯೋತ್ಪಾದನೆ ದೊಡ್ಡದಲ್ಲ. ಭಯೋತ್ಪಾದನೆ ಪರವಾಗಿ ನಿಂತ ಕಾಂಗ್ರೆಸ್ ಪರಿಸ್ಥಿತಿ ಈಗಾಗಲೇ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಜೊತೆಗಿನ ಸಂಬಂಧದ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಧೂಳು ತಿನ್ನುವಂತೆ ಮಾಡಿದೆ. ಅವರು ಮತಕ್ಕಾಗಿ ಓಲೈಕೆ ಮಾಡುತ್ತ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ನಿಲುವನ್ನು ಸಿದ್ದರಾಮಯ್ಯರವರು ಬೆಂಬಲಿಸುತ್ತಾರಾ ಅಥವಾ ಆಕ್ಷೇಪಿಸುತ್ತಾರಾ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.

ಸಿ.ಟಿ.ರವಿ ವಿರುದ್ಧ ಹೇಳಿಕೆಗೆ ಆಕ್ರೋಶ

ಕಾಂಗ್ರೆಸ್ ವಕ್ತಾರ ಮೈಸೂರಿನ ಲಕ್ಷ್ಮಣ್ ಅವರು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. “ಅವರ ಅಪ್ಪ ಆಟೋ ಚಾಲಕರಾಗಿದ್ದರು. ಸಿ.ಟಿ.ರವಿ ಮೇಲೆ ಕ್ರಿಮಿನಲ್ ಕೇಸುಗಳಿವೆ ಎಂದಿದ್ದಾರೆ. ಲಕ್ಷ್ಮಣ್ ಅವರಿಗೆ ಹುಚ್ಚು ಹಿಡಿದಿದೆಯೇ ಗೊತ್ತಿಲ್ಲ.ಮೊದಲು ಅವರನ್ನು ಆಸ್ಪತ್ರೆಗೆ ಸೇರಿಸಿ ಚೆಕಪ್ ಮಾಡಿಸುವುದು ಒಳ್ಳೆಯದು” ಎಂದು ವ್ಯಂಗ್ಯವಾಡಿದರು.

“ಸಿ.ಟಿ.ರವಿ ಅವರ ತಂದೆ ಯಾವತ್ತೂ ಆಟೋ ಡ್ರೈವರ್ ಆಗಿರಲಿಲ್ಲ. ಅವರೊಬ್ಬ ಜಮೀನ್ದಾರರು ಅವರಿಗೆ ಕಾಫಿ ಎಸ್ಟೇಟ್ ಇತ್ತು. ಸಿ.ಟಿ.ರವಿ ಒಬ್ಬ ಹೋರಾಟಗಾರರು. ವಿದ್ಯಾರ್ಥಿ ಸಂಘಟನೆಗಳಿಂದ ಹೋರಾಟ ಮಾಡುತ್ತ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ಇವತ್ತು ರಾಷ್ಟ್ರಮಟ್ಟದ ನಾಯಕತ್ವವನ್ನು ಹೊಂದಿದ್ದು, ಅವರನ್ನು ಅವಹೇಳನಕಾರಿಯಾಗಿ ಮಾತನಾಡಿರುವುಉ ಸರಿಯಲ್ಲ ಎಂದರು. ಸಿ.ಟಿ.ರವಿ ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್ ಕಳಿಸಿದರೆ ಅದನ್ನು ತೆಗೆದುಕೊಳ್ಳಲು ಲಕ್ಷ್ಮಣ್ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಇಂತಹ ಹೇಡಿತನ ಪ್ರದರ್ಶಿಸುವವರು ಸಿ.ಟಿ.ರವಿ ಅವರ ಬಗ್ಗೆ ಮಾತನಾಡುವುದು ಖಂಡನೀಯ.

ದೇಶದಲ್ಲಿ ಆದ ಭಯೋತ್ಪಾದನಾ ಕೃತ್ಯಗಳಿಂದ ದೇಶವು ಅಭಿವೃದ್ಧಿಯನ್ನು ಕಳೆದುಕೊಂಡಿದೆ ಎಂಬ ಪ್ರಜ್ಞೆ ಕಾಂಗ್ರೆಸ್ ಮುಖಂಡರಿಗೆ ಇನ್ನೂ ಬಂದಂತಿಲ್ಲ. ಬಿಜೆಪಿ ಉಗ್ರವಾದ ಮತ್ತು ದೇಶವನ್ನು ಅಭದ್ರಗೊಳಿಸುವ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ಮಾಡುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಬದಲಾವಣೆಯೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರು. ಭಯೋತ್ಪಾದನಾ ಕೃತ್ಯಗಳನ್ನು ಹದ್ದುಬಸ್ತಿಗೆ ತರುವ ಕೆಲಸವನ್ನು ಮೋದಿಜಿ ಅವರ ನೇತೃತ್ವದ ಸರಕಾರ ಮಾಡಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!