Tuesday, March 28, 2023

Latest Posts

ಚಾಂಪಿಯನ್ ಅಂಡರ್ 19 ಮಹಿಳೆಯ ಟೀಮ್ ಗೆ ಬಿಸಿಸಿಐಯಿಂದ ಸನ್ಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಡರ್ 19 ಮಹಿಳೆಯ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ ಮತ್ತು ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯ ಆರಂಭಕ್ಕೆ ಮುನ್ನ ನಡೆದ ಕಾರ್ಯಕ್ರಮದಲ್ಲಿ ಶಫಾಲಿ ವರ್ಮಾ ಪಡೆ ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ 5 ಕೋಟಿ ರುಪಾಯಿ ಬಹುಮಾನದ ಚೆಕ್‌ ನೀಡಿ ಗೌರವಿಸಿದರು.

ಭಾರತದ ಯುವ ತಂಡಕ್ಕೆ ಅಭಿನಂದಿಸಿದ ಸಚಿನ್ ತೆಂಡೂಲ್ಕರ್,ಇಡೀ ದೇಶ ಮತ್ತು ಭಾರತೀಯ ಕ್ರಿಕೆಟ್‌ನ ಅಭಿಮಾನಿಗಳು ಈ ಜಯವನ್ನು ಬಹಳ ದಿನಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನನಗೆ 10 ವರ್ಷದವನಿದ್ದಾಗ 1983ರಲ್ಲಿ ಕನಸು ಆರಂಭವಾಯಿತು. ಈ ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಯುವತಿಯರಲ್ಲಿ ಕನಸನ್ನು ಬಿತ್ತಿದ್ದೀರಾ. ನಿಮ್ಮಂತೆ ಆಗಬೇಕೆಂದು ಕನಸು ಕಾಣುವ ಅನೇಕ ಯುವತಿಯರು ದೇಶದ ಒಳಗೆ ಮತ್ತು ಹೊರಗೆ ಇದ್ದಾರೆ. ನಿಮಗೆ ಅಭಿನಂದನೆಗಳು. ನೀವು ಅನೇಕ ಜನವರಿಗೆ ಆದರ್ಶವಾಗಿರುವುದರಿಂದ, ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!