Wednesday, March 29, 2023

Latest Posts

10 ವರ್ಷಗಳಲ್ಲಿ ಭಾರತದ ತಲಾ ಆದಾಯ ಶೇ.175 ರಷ್ಟು ಹೆಚ್ಚಳ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಆರ್ಥಿಕತೆಯು ಕಳೆದ 9 ವರ್ಷಗಳ ಹಿಂದೆ ವಿಶ್ವದ 10 ನೇ ಅತಿದೊಡ್ಡ ಆರ್ಥಿಕತೆಯಿದ್ದುದು ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಇದೇ ರೀತಿ ಭಾರತೀಯರ ತಲಾ ಆದಾಯ ಕೂಡಾ ಕಳೆದ 10ವರ್ಷಗಳ ಹಿಂದೆ 71,609 ರೂ.ಗಳಿದ್ದುದು ಈಗ 1.97ಲ.ರೂ.ಗಳಿಗೇರಿದೆ. ಇದು ಕಳೆದ 10 ವರ್ಷಗಳಲ್ಲಿ ಶೇ. 175 ರಷ್ಟು ಭಾರೀ ಬೆಳವಣಿಗೆಯನ್ನು ದಾಖಲಿಸಿರುವುದನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೊಟ್ಟು ಮಾಡಿದ್ದಾರೆ.

ಕೋವಿಡ್‌ನ ಹೊಡೆತದ ನಡುವೆಯೂ ಭಾರತದ ಈ ಸಾಧನೆಯನ್ನು ವಿಶ್ವದ ಆರ್ಥಿಕ ತಜ್ಞರು ಕೂಡ ಎತ್ತಿತೋರಿದ್ದಾರೆ. 2021 ನೇ ಆರ್ಥಿಕ ವರ್ಷದಲ್ಲಿ ಕೋವಿಡ್ ಕಾರಣದಿಂದ ಆರ್ಥಿಕ ಹಿಂಜರಿತ ಉಂಟಾಗಿದ್ದರೂ ಅಲ್ಲಿಂದ ಮತ್ತೆ ಭಾರತೀಯ ಆರ್ಥಿಕತೆ ಪುಟಿದೆದ್ದಿದೆ.ಇದು ಹಲವು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಮಹತ್ವದ್ದಾಗಿದೆ ಎಂದು ನಿರ್ಮಲಾ ನುಡಿದರು. 1950 ರಲ್ಲಿ ಭಾರತೀಯರ ತಲಾ ಆದಾಯ 265 ರೂ.ಗಳಾಗಿತ್ತು.

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ದೇಶದ ನಾಗರಿಕರ ಜೀವನ ಮಟ್ಟವನ್ನು ಉತ್ತಮಗೊಳಿಸಬೇಕೆಂಬ ಸಂಕಲ್ಪ ತೊಡಲಾಗಿತ್ತು ಎಂದು ನೆನಪಿಸಿಕೊಂಡ ನಿರ್ಮಲಾ ಅವರು, 2022 ರ ಭಾರತೀಯ ಪರಿಸರಾತ್ಮಕ ವರದಿಯಂತೆ, ದೇಶದ ಒಟ್ಟಾರೆ ಎಸ್‌ಡಿಜಿ ಅಂಕ 100 ರಲ್ಲಿ ಈಗ 66 ಆಗಿದೆ.

ಮೋದಿ ಸರಕಾರದ ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಬಡತನ ನಿವಾರಣೆ, ಶೂನ್ಯ ಹಸಿವು , ಜನರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ನೀರು ಮತ್ತು ನೈರ್ಮಲ್ಯೀಕರಣ, ಕೈಗೆಟಕುವ ಮತ್ತು ಸ್ವಚ್ಛ ಇಂಧನ, ಉತ್ತಮ ದುಡಿಮೆ ವಾತಾವರಣ ಮತ್ತು ಆರ್ಥಿಕ ಪ್ರಗತಿ, ಉದ್ಯಮ, ಆವಿಷ್ಕಾರ, ಮೂಲಸೌಕರ್ಯ, ಅಸಮಾನತೆ ನಿವಾರಣೆ, ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಜಾಗತಿಕ ಪಾಲುದಾರಿಕೆಯನ್ನು ಬಲಗೊಳಿಸುವಿಕೆ ಸೇರಿದೆ ಎಂದು ನಿರ್ಮಲಾ ಅವರು ವಿವರಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!