Champions Trophy | ಅಫ್ಘಾನಿಸ್ತಾನ್ ಚಾಂಪಿಯನ್ಸ್‌ ಟ್ರೋಫಿ ಕನಸು ಭಗ್ನ, ಸೆಮಿಫೈನಲ್​ಗೇರಿದ ದಕ್ಷಿಣ ಆಫ್ರಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025 ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​ಗೆ 4 ತಂಡಗಳು ಎಂಟ್ರಿಕೊಟ್ಟಿವೆ. ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿದೆ. ಇತ್ತ ಆಸ್ಟ್ರೇಲಿಯಾ ಕೂಡ ಸೆಮೀಸ್​ಗೆ ಅರ್ಹತೆ ಗಳಿಸಿದೆ. ಇದೀಗ ದಕ್ಷಿಣ ಆಫ್ರಿಕಾ ಕೂಡ ನಾಲ್ಕನೇ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಿದೆ.

ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದ ಫಲಿತಾಂಶ ಪ್ರಕಟವಾಗುವ ಮೊದಲೇ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಟಿಕೆಟ್ ಪಡೆದುಕೊಂಡಿದೆ. ಆಫ್ರಿಕಾ ಸೆಮೀಸ್​ಗೇರುತ್ತಿದ್ದಂತೆ, ಅಫ್ಘಾನಿಸ್ತಾನದ ಭರವಸೆ ಭಗ್ನಗೊಂಡಿದೆ.

ಇಂದು ನಡೆಯುತ್ತಿರುವ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಆಫ್ರಿಕಾ 210 ಕ್ಕೂ ಹೆಚ್ಚು ರನ್​ಗಳಿಂದ ಹೀನಾಯವಾಗಿ ಸೋತರೆ ಮಾತ್ರ ಅಫ್ಘಾನಿಸ್ತಾನ ನೆಟ್ ರನ್​ರೇಟ್ ಆದಾರದ ಮೇಲೆ ಸೆಮಿಫೈನಲ್‌ ತಲುಪಬಹುದಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!