ಹೊಸದಿಗಂತ ಕಲಬುರಗಿ:
ಮಹಾರಾಷ್ಟ್ರದಿಂದ ಕಲಬುರಗಿ ಜಿಲ್ಲೆಯ ಆಳಂದಕ್ಕೆ ಬಂದಿದ್ದ ಮಹಾರಾಷ್ಟ ಬಸ್ ಚಾಲಕನಿಗೆ ಜೈ ಕರ್ನಾಟಕ ಸಂಘಟನೆಯಿಂದ ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಮಾನವಿಯತೆ ಮೆರೆದು, ಪುಂಡಾಟ ಮೇರೆಯುತ್ತಿರುವ ಮರಾಠಿಗರಿಗೆ ನಾಚಿಕೆಯಾಗುವಂತೆ ಟಾಂಗ್ ಕೊಟ್ಟಿದ್ದಾರೆ.
ಕಲಬುರಗಿ ನಗರದ ಆಳಂದ ಚೆಕ್ ಪೋಸ್ಟ್ ನಲ್ಲಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ್ ನೇತೃತ್ವದಲ್ಲಿ ಮಹಾರಾಷ್ಟ್ರ ಬಸ್ ತಡೆದು ಚಾಲಕನಿಗೆ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಅಲ್ಲದೆ ಬಸ್ ಮೇಲೆ ಜೈ ಕನ್ನಡ ಎಂದು ಬರೆದು ಮಸಿ ಬಳಿದು ಆಕ್ರೋಶ ಹೊರ ಹಾಕಿದ್ದಾರೆ.
ಈ ಮೂಲಕ ಪುಂಡಾಟ ಮೇರೆಯುತ್ತಿರುವ ಮರಾಠಿಗರಿಗೆ ಮಾನವಿಯತೇ ಪಾಠ ಕನ್ನಡಿಗರು ಕಲಿಸಿಕೊಟ್ಟಿದ್ದಾರೆ. ಕರ್ನಾಟಕವನ್ನ ಪದೇ ಪದೇ ಕೆಣಕುವಂತಹ ಕೆಲಸ ಮಾಡಬೇಡಿ ಎಂದು ಶಾಂತಿ ಸಾರಿದ್ದಾರೆ. ವೀರ ಕನ್ನಡಿಗರಿಗೆ ಕೆಣಕಿದ್ರೆ ಮುಂದಿನ ದಿನಗಳಲ್ಲಿ ಸುಮ್ಮನೆ ಕೂರುವುದಿಲ್ಲ ಎಂದು ಪುಂಡಾಟ ಮೇರೆಯುತ್ತಿರುವ ಮರಾಠಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.