Champions Trophy | 25 ವರ್ಷಗಳ ನಂತರ ಭಾರತ-ಕಿವೀಸ್ ಮುಖಾಮುಖಿ, ಈ ಬಾರಿ ಯಾರಿಗೆ ಗೆಲುವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಾಳೆ ನಡೆಯುವ ಕೊನೆಯ ಪಂದ್ಯದೊಂದಿಗೆ ಲೀಗ್ ಹಂತ ಮುಗಿಯಲಿದೆ. ಆ ಬಳಿಕ ನಾಕೌಟ್ ಸುತ್ತು ಆರಂಭವಾಗಲಿದೆ. ಇನ್ನು ಭಾರತ ಹಾಗೂ ಕಿವೀಸ್ ನಡುವಿನ ಮುಖಾಮುಖಿ ಬರೋಬ್ಬರಿ 25 ವರ್ಷಗಳ ನಂತರ ಉಭಯ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗುತ್ತಿದೆ.

ದೀಗ 6 ವರ್ಷಗಳ ನಂತರ ನಡೆಯುತ್ತಿರುವ ಈ ಟೂರ್ನಿಯಲ್ಲಿ ಭಾರತ ತಂಡ 25 ವರ್ಷಗಳ ಬಳಿಕ ಕಿವೀಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಹಂತದ ಪಂದ್ಯವನ್ನು ಆಡಲು ಟೀಂ ಇಂಡಿಯಾ ಸಿದ್ಧವಾಗಿದೆ. ಈ ಟೂರ್ನಿಯಲ್ಲಿ ಈ ಎರಡೂ ತಂಡಗಳ ನಡುವೆ ಇಲ್ಲಿಯವರೆಗೆ ಒಂದೇ ಒಂದು ಪಂದ್ಯ ನಡೆದಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!