ಹೊಸದಿಗಂತ ಡಿಜಿಟಲ್ ಡೆಸ್ಕ್;
ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ವರುಣನ ಎಂಟ್ರಿಯಾಗಿದೆ.
ಪಾಕಿಸ್ತಾನದ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಿಗದಿಯಂತೆ ಈ ಎರಡು ತಂಡಗಳ ಪಂದ್ಯದ ಟಾಸ್ 2 ಗಂಟೆಗೆ ನಡೆದು, ಆಟ 2:30 ಕ್ಕೆ ಆರಂಭವಾಗಬೇಕಿತ್ತು. ಆದರೆ ಮಳೆಯಾಗುತ್ತಿರುವ ಕಾರಣ ಇದುವರೆಗೂ ಟಾಸ್ ಕೂಡ ನಡೆಸಲಾಗಿಲ್ಲ. ಇದು ಉಭಯ ತಂಡಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಈ ಸೂಪರ್‌ಹಿಟ್ ಪಂದ್ಯ ಆರಂಭವಾಗುವ ಮುನ್ನ, ಮಳೆಯಿಂದಾಗಿ ಟಾಸ್ ನಡೆಯಲು ಸಾಧ್ಯವಾಗದ ಕಾರಣ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಗೆದ್ದು, ಈ ಪಂದ್ಯಕ್ಕೆ ಕಾಲಿಡುತ್ತಿವೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಆದರೆ ಮಳೆಯಿಂದಾಗಿ ಪಂದ್ಯ ಇನ್ನು ಆರಂಭವಾಗಿಲ್ಲ.
ಒಂದು ವೇಳೆ ಮಳೆಯಿಂದ ಪಂದ್ಯ ನಡೆಯದೆ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಸಿಗಲಿದೆ.