ಮಗಳ ಬರ್ಥ್‌ಡೇಗೆ ಸುತ್ತೋಲೆ ಹೊರಡಿಸಿದ ಕುವೆಂಪು ವಿವಿ ಕುಲಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ವಿವಿ ಕುಲಪತಿ ಮಗಳ ಹುಟ್ಟುಹಬ್ಬಕ್ಕೆ ಸುತ್ತೋಲೆ ರೀತಿ ಆಹ್ವಾನ ನೀಡಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಖಾಸಗಿ ರೀತಿಯಲ್ಲಿ ಆಹ್ವಾನ ನೀಡಬೇಕೇ ಹೊರತು, ಸರ್ಕಾರ ಲೆಟರ್‌ಹೆಡ್‌ಗಳನ್ನು ದುರ್ಬಳಕೆ ಮಾಡುವುದು ತಪ್ಪಾಗಿದೆ. ವಿವಿಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ತಮ್ಮ ಮಗಳ ಜನ್ಮದಿನಕ್ಕೆ ಈ ರೀತಿ ಸುತ್ತೋಲೆ ಹೊರಡಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಗಳು ಹಾಗೂ ಎಲ್ಲರಿಗೂ ಸಂತೋಷಕೂಟದಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!