ಚಂಡೀಗಢ ವಿಡಿಯೋ ಲೀಕ್‌ ಪ್ರಕರಣ: ತಪ್ಪಿತಸ್ಥ ಯುವತಿಯನ್ನು ಬ್ಲಾಕ್‌ ಮೇಲ್‌ ಮಾಡಿದ್ದ ಆರೋಪಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಂಡೀಗಢ ವಿಶ್ವವಿದ್ಯಾನಿಲಯದ ವಿಡಿಯೋ ಸೋರಿಕೆ ಪ್ರಕರಣದ ಆರೋಪಿಗಳಿಬ್ಬರು ಬಂಧಿತ ಮಹಿಳಾ ವಿದ್ಯಾರ್ಥಿನಿಯನ್ನು ಇತರ ಹಾಸ್ಟೆಲ್‌ಗಳ ವೀಡಿಯೊಗಳನ್ನು ಹಂಚಿಕೊಳ್ಳಲು ಬ್ಲಾಕ್‌ಮೇಲ್ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಆರೋಪಿ ಸನ್ನಿ ಮೆಹ್ತಾ ಮತ್ತು ಆತನ ಸ್ನೇಹಿತ ರಂಕಜ್ ವರ್ಮಾ ಎಂಬಿಬ್ಬರು ಮಹಿಳಾ ವಿದ್ಯಾರ್ಥಿನಿಗೆ ಸಾಮಾನ್ಯ ವಾಶ್ ರೂಂನಲ್ಲಿ ಹಾಸ್ಟೆಲ್‌ ನ ಇತರ ವಿದ್ಯಾರ್ಥಿನಿಯರ ವೀಡಿಯೊಗಳನ್ನು ಚಿತ್ರೀಕರಿಸಿ ಹಂಚಿಕೊಳ್ಳದಿದ್ದರೆ ಆಕೆಯ ಖಾಸಗಿ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಭಯಭೀತಳಾದ ಯುವತಿ ಅವರು ಹೇಳಿದಂತೆ ಹಾಸ್ಟೆಲ್‌ ನಲ್ಲಿ ಇತರ ವಿದ್ಯಾರ್ಥಿನಿ ವಿಡಿಯೋವನ್ನು ಚಿತ್ರೀಕರಿಸಿ ಆರೋಪಿಗಳಿಗೆ ಕಳಿಸಿದ್ದಳು ಎಂದು ಮೂಲಗಳ ವರದಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಕೃತ್ಯದಲ್ಲಿ ಭಾಗಿಯಾದ ಮೂವರನ್ನೂ ಬಂಧಿಸಿದ್ದಾರೆ. ಬಂಧಿತರಲ್ಲಿ ಮಹಿಳಾ ವಿದ್ಯಾರ್ಥಿನಿ, ಹಾಗೂ ಆಕೆಯ ಗೆಳೆಯ ಎನ್ನಲಾಗಿರುವ ಹಿಮಾಚಲ ಪ್ರದೇಶದ 23 ವರ್ಷದ ಯುವಕ, ಮತ್ತು ಅವನ 31 ವರ್ಷದ ಸ್ನೇಹಿತನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!