Monday, September 26, 2022

Latest Posts

ಸಿಬಿಐ,ಇ.ಡಿ ಸೇರಿ ಕೇಂದ್ರೀಯ ಸಂಸ್ಥೆಗಳ ವಿರುದ್ಧ ನಿರ್ಣಯ ಮಂಡಿಸಿದ ರಾಜ್ಯ ಪಶ್ಚಿಮ ಬಂಗಾಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಇತರ ಕೇಂದ್ರೀಯ ಸಂಸ್ಥೆಗಳ ವಿರುದ್ಧ ಮೊದಲ ಬಾರಿಗೆ ಪಶ್ಚಿಮ ಬಂಗಾಳ ನಿರ್ಣಯ ಅಂಗೀಕರಿಸಿದೆ. ಆಡಳಿತ ಪಕ್ಷಗಳ ಪದಾಧಿಕಾರಿಗಳನ್ನು ನಿರ್ದಿಷ್ಟವಾಗಿ ಆಯ್ಕೆ ಮಾಡಿ, ಟಾರ್ಗೆ ಮಾಡಲಾಗಿದೆ ಜೊತೆಗೆ ಭಯದ ವಾತಾವರಣವೂ ಇದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಗಂಭೀರ ಆರೋಪ ಮಾಡಿದೆ.

ಟಿಎಂಸಿ ಶಾಸಕರಾದ ನಿರ್ಮಲ್ ಘೋಷ್ ಹಾಗೂ ತಪಸ್ ರಾಯ್ ನಿರ್ಣಯ ಮಂಡಿಸಿದರು. ಬಿಜೆಪಿ ನಾಯಕರ ಹೆಸರು ಚಿಟ್ ಫಂಡ್ ಹಗರಣಗಳಲ್ಲಿದೆ. ಆದರೂ ಏಜೆನ್ಸಿಗಳು ಹಗರಣದ ಒಂದು ಭಾಗ ಮಾತ್ರ ಟಾರ್ಗೆಟ್ ಮಾಡುತ್ತಿವೆ ಎಂದು ನಿರ್ಣಯ ಮಂಡಿಸಿದೆ.

ಇದರ ಹಿಂದೆ ಪ್ರಧಾನಿ ಮೋದಿ ಇದ್ದಾರೆ ಎನ್ನುವ ಮಾತಿದೆ, ಆದರೆ ಇದನ್ನು ನಾವು ನಂಬುವುದಿಲ್ಲ. ಬಿಜೆಪಿ ನಾಯಕರ ಗುಂಪೊಂದು ಅವರ ಹಿತಾಸಕ್ತಿಗಾಗಿ ಈ ರೀತಿ ಮಾಡಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!