ಯೂಟ್ಯೂಬ್​ನಲ್ಲಿ ಚಂದ್ರಯಾನ-3 ಅಬ್ಬರ: ಅತಿಹೆಚ್ಚು ಜನರಿಂದ ನೇರ ವೀಕ್ಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ನೌಕೆ ಯಶಸ್ಸಿಯಾಗಿ ಇಳಿದಿದ್ದು, ಈ ಮೂಲಕ ಭಾರತ ಸಾಧನೆ ಮಾಡಿದೆ.

ಈ ಕ್ಷಣಕ್ಕೆ ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ಬ್ರಿಕ್ಸ್ ಸಭೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ಆನ್​ಲೈನ್​ನಲ್ಲಿ ಈ ಸಾಕ್ಷಿಯಾದರು.ಇತ್ತ ದೇಶವಾಸಿಗಳು ಕೂಡ ಚಂದ್ರಯಾನ-3 ನೆಲ ಸ್ಪರ್ಶಿಸುವ ಕ್ಷಣದಲ್ಲಿ ವಿವಿಧ ಸಾಮಾಜಿಕ ಜಾಲತಾಣದ ಮೂಲಕ ಜೊತೆಯಾದರು.

ಯೂಟ್ಯೂಬ್​ನಲ್ಲಿ 82 ಲಕ್ಷಕ್ಕೂ ಹೆಚ್ಚು ಮಂದಿ ಆ ಕ್ಷಣಗಳನ್ನು ನೇರವಾಗಿ ವೀಕ್ಷಿಸಿದ್ದು ವಿಶೇಷವಾಗಿತ್ತು. ಇದು ಯೂಟ್ಯೂಬ್ ಮಟ್ಟಿಗೆ ಹೊಸ ದಾಖಲೆಯೇ ಆಗಿದೆ.

2022ರ ಫೀಫಾ ವರ್ಲ್ಡ್ ಕಪ್ ಕ್ವಾರ್ಟರ್​ಫೈನಲ್ ಪಂದ್ಯ ಯೂಟ್ಯೂಬ್​ನಲ್ಲಿ 61 ಲಕ್ಷ ನೇರ ವೀಕ್ಷಕರನ್ನು ಕಂಡಿತ್ತು. ಇದು ಯೂಟ್ಯೂಬ್​ನಲ್ಲಿ ಅತಿಹೆಚ್ಚು ನೇರ ವೀಕ್ಷಣೆ ಪಡೆದ ಕಾರ್ಯಕ್ರಮ ಎಂಬ ದಾಖಲೆ ಬರೆದಿತ್ತು.

ಈಗ ಯೂಟ್ಯೂಬ್​ನಲ್ಲಿ ಇಸ್ರೋದ ಚಾನಲ್​ನಲ್ಲಿ ಚಂದ್ರಯಾನ ಕಾರ್ಯಕ್ರಮದ ನೇರ ಪ್ರಸಾರ ಇತ್ತು. ಲ್ಯಾಂಡಿಂಗ್ ಕ್ಷಣ ಸಮೀಪಿಸುವಾಗ ಲೈವ್ ವೀಕ್ಷಕರ ಸಂಖ್ಯೆ 82 ಲಕ್ಷ ದಾಟಿ ಹೋಗಿತ್ತು. ಇದರೊಂದಿಗೆ ಯೂಟ್ಯೂಬ್ ಲೈವ್ ವೀಕ್ಷಣೆಯಲ್ಲಿ ಚಂದ್ರಯಾನ ಪ್ರಸಾರ ಹೊಸ ದಾಖಲೆ ಸ್ಥಾಪಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!