ಚೆಸ್ ವಿಶ್ವಕಪ್ ಫೈನಲ್‌: ಎರಡನೇ ಪಂದ್ಯವೂ ಡ್ರಾನಲ್ಲಿ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಡೀ ವಿಶ್ವವೇ ಇಂದು ಭಾರತದತ್ತ ಚಿತ್ತ ಹರಿಸಿದೆ, ಇದಕ್ಕೆ ಕಾರಣ ಚಂದ್ರಯಾನ ೩ರ ಯಶಸ್ಸು. ಇದರ ಜೊತೆಗೆ ಮತ್ತೊಂದು ಕ್ಷಣದತ್ತ ಎಲ್ಲರ ಚಿತ್ತ ಇತ್ತು. ಅದೇನೆಂದರೆ ಫಿಡೆ ವಿಶ್ವಕಪ್ ಫೈನಲ್‌.

ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಆರ್ ಪ್ರಗ್ನಾನಂದ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ಅವರ ಎರಡನೇ ಗೇಮ್‌ನಲ್ಲಿ ಡ್ರಾ ಸಾಧಿಸಿ ಪಂದ್ಯ ಟೈಬ್ರೇಕರ್‌ ಆಗಿದೆ.

ಇದೀಗ ಸ್ಪರ್ಧೆಯ ವಿಜೇತರನ್ನು ಈಗ ಗುರುವಾರ (ಆಗಸ್ಟ್ 24) ನಿರ್ಧರಿಸಲಾಗುತ್ತದೆ.

ಪ್ರಗ್ನಾನಂದ ಮತ್ತು ಮ್ಯಾಗ್ನಸ್ ಕಾರ್ಲ್ಸನ್ ನಡುವಿನ ಫಿಡೆ ವಿಶ್ವಕಪ್ ಫೈನಲ್‌ನ ಮೊದಲ ಪಂದ್ಯವು 35 ನಡೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು. ಗಇದೀಗ ಎರಡನೇ ದಿನದ ಆಟ ಡ್ರಾದಲ್ಲಿ ಕೊನೆಗೊಂಡ ನಂತರ ಟೈಬ್ರೇಕರ್‌ನಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!