ಚಂದ್ರನ ಅಂಗಳದಲ್ಲಿ ‘ಚಂದ್ರಯಾನ 3’: ಸಂತಸ ಹಂಚಿಕೊಂಡ ಅಕ್ಷಯ್​, ಹೃತಿಕ್​, ಯಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಚಂದ್ರಯಾನ 3’ (Chandrayaan 3) ಯೋಜನೆ ಯಶಸ್ವಿ ಆಗಿದೆ. ಚಂದ್ರನ ಅಂಗಳದ ಮೇಲೆ ವಿಕ್ರಮ್​ ಲ್ಯಾಂಡರ್​ ಕಾಲಿಟ್ಟಿದೆ. ಈ ಐತಿಹಾಸಿಕ ಕ್ಷಣಕ್ಕೆ ವಿಶ್ವದ ಜನರು ಸಾಕ್ಷಿ ಆಗಿದ್ದಾರೆ.

ಇಸ್ರೋ ವಿಜ್ಞಾನಿಗಳ (ISRO Scientist) ಈ ಸಾಧನೆಯನ್ನು ಭಾರತೀಯರು ಸಂಭ್ರಮಿಸುತ್ತಿದ್ದಾರೆ.

ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ವೇಳೆ ಯಶ್​ (Yash), ಹೃತಿಕ್​ ರೋಷನ್​, ಅಕ್ಷಯ್​ ಕುಮಾರ್​ ಮುಂತಾದ ಸೆಲೆಬ್ರಿಟಿಗಳು ಕೂಡ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

‘ಕೋಟ್ಯಂತರ ಹೃದಯಗಳು ಇಸ್ರೋಗೆ ಧನ್ಯವಾದ ತಿಳಿಸುತ್ತಿವೆ. ನಾವು ಹೆಮ್ಮೆ ಪಡುವಂತೆ ನೀವು ಮಾಡಿದ್ದೀರಿ. ಭಾರತ ಇತಿಹಾಸ ನಿರ್ಮಿಸಿದ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಕ್ಕೆ ನಾನು ಅದೃಷ್ಟವಂತ. ಭಾರತ ಈಗ ಚಂದ್ರನ ಅಂಗಳದಲ್ಲಿದೆ. ನಾವು ಚಂದ್ರನ ಮೇಲಿದ್ದೇವೆ’ ಎಂದು ಅಕ್ಷಯ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದಾರೆ.

ಅದೇ ರೀತಿ ಹೃತಿಕ್​ ರೋಷನ್​ ಕೂಡ ‘ಇಂದು ನನ್ನ ಹೃದಯ ಇನ್ನೂ ಹೆಚ್ಚಿನ ಹೆಮ್ಮೆಯ ಭಾವದಿಂದ ತುಂಬಿ ಬಂದಿದೆ. ಚಂದ್ರಯಾನ 3 ಯೋಜನೆಯ ಹಿಂದಿರುವ ಎಲ್ಲರಿಗೂ ನನ್ನ ಅಭಿನಂದನೆ ಮತ್ತು ಧನ್ಯವಾದಗಳು’ ಎಂದು ಟ್ವೀಟ್​ ಮಾಡಿದ್ದಾರೆ.

ನಟ ಯಶ್​ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ‘ಪ್ರಯತ್ನಿಸುವವರಿಗೆ ಯಾವುದೂ ಅಸಾಧ್ಯವಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್​ ಮಾಡಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ನೀವು ಇತಿಹಾಸ ನಿರ್ಮಿಸಿದ್ದೀರಿ. ಎಲ್ಲ ಭಾರತೀಯರಿಗೂ ಹೆಮ್ಮೆ ತಂದಿದ್ದೀರಿ. ಮುಂದಿನ ಪೀಳಿಗೆಗೆ ಸ್ಫೂರ್ತಿ ಆಗಿದ್ದೀರಿ’ ಎಂದು ರಾಕಿಂಗ್​ ಸ್ಟಾರ್​ ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!