ಉಡಾವಣೆಯಿಂದ ಲ್ಯಾಂಡ್‌ ಆಗುವವರೆಗೂ ನಾವು ಅಂದುಕೊಂಡಂತೆ ಆಗಿದೆ: ಇಸ್ರೋ ವಿಜ್ಞಾನಿ ಮುತ್ತುವೇಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಚಂದ್ರಯಾನ-3 ವಾಹಕವನ್ನು ಉಡಾವಣೆ ಮಾಡಿದ ದಿನದಿಂದಲೂ ವಿಕ್ರಮ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗುವವರೆಗೂ ನಾವು ಅಂದುಕೊಂಡಂತೆ ಆಗಿದೆ. ಎಲ್ಲವೂ ಟೈಮ್‌ಲೈನ್‌ ಪ್ರಕಾರವೇ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಾಜೆಕ್ಟ್ ಡೈರೆಕ್ಟರ್ ಮುತ್ತುವೇಲ್ ಹೇಳಿದ್ದಾರೆ.

ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲಿಯೇ ಇಸ್ರೋ ವಿಜ್ಞಾನಿ ಹಾಗೂ ಇಸ್ರೋ ಯೋಜನಾ ನಿರ್ದೇಶಕ ಮುತ್ತುವೇಲ್‌ ಅವರು ಮಾತನಾಡಿ, ಚಂದ್ರಯಾನ-3 ನೌಕೆ ಉಡಾವಣೆಯಿಂದ ಈವರೆಗೆ ನಾವು ಅಂದುಕೊಂಡಂತೆಯೇ ಪ್ರಕ್ರಿಯೆ ನಡೆದಿದೆ. ಇನ್ನು ಸಾಫ್ಟ್ ಲ್ಯಾಂಡಿಂಗ್ ವಿಚಾರ ತುಂಬಾ ಸಂತೋಪ ತಂದಿದೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಹೆಮ್ಮೆ ಹೆಗ್ಗಳಿಕೆ ಇದೆ ಎಂದು ತಿಳಿಸಿದರು.

ಇಸ್ರೋ ಅಧಿಕಾರಿಗಳೆಲ್ಲರಿಗೂ ಧನ್ಯವಾದಗಳನ್ನ ತಿಳಿಸ್ತೇನೆ. ಲಾಂಚ್ ಆದಾಗಿಂನಿಂದ ಲ್ಯಾಂಡ್ ಆಗುವ ತನಕ ನಾವು ಅಂದುಕೊಂಡಂತೆ ನಡೆದಿದೆ ಟೈಮ್ ಲೈನ್ ಪ್ರಕಾರವೇ ಎಲ್ಲಾ ಪ್ರಕ್ರಿಯೆ ನಡೆದಿದೆ. ಪ್ರಕ್ರಿಯೆಗೆ ಎಲ್ಲಾ ಟೀಂ ಗಳ ಸಹಕಾರ ಮಹತ್ವದ್ದಾಗಿತ್ತು. ಹೀಗಾಗಿ ನಮ್ಮ ಜೊತೆ ಕೆಲಸ ಮಾಡಿದ ತಂಡಕ್ಕೆ ಧನ್ಯವಾದಗಳು ಎಂದು ಹೇಳಿದರು.

ಯು.ಆರ್ ರಾವ್ ಸ್ಯಾಟಲೈಟ್ ಸೆಂಟರ್ ಮುಖ್ಯಸ್ಥ ಶಂಕರನ್ ಮಾತನಾಡಿ, ಚಂದ್ರಯಾನ-3 ಗೆ ಸಾಕಷ್ಟು ಬೆಂಬಲ ಸಿಕ್ಕಿತ್ತು. ಸಾಕಷ್ಟು ಪರಿಶ್ರಮ ಹಾಕಿದ್ದು ಫಲ ಕೊಟ್ಟಿದೆ. ಚಂದ್ರಯಾನ-2 ಆದ ನೋವು ಮರೆಯಾಗಿದೆ ಎಂದು ಮಾತಿನ ಮಧ್ಯೆ ಭಾವುಕರಾದರು. ಚಂದ್ರಯಾನ 3 ನಮಗೆ ಹೊಸ ಟಾಸ್ಕ್ ಕೊಟ್ಟಿದೆ. ಮಾನವ ಸಹಿತ ಉಪಗ್ರಹ ಉಡಾವಣೆ ಮಾಡಲು ಇದು ಸಹಕಾರಿಯಾಗಿದೆ. ಪರೋಕ್ಷ, ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!