ಚಂದ್ರಯಾನ -3 ಯಶಸ್ಸು: ಬ್ರಿಕ್ಸ್​ ಶೃಂಗ ಸಭೆಯಲ್ಲೂ ಭಾರತದ ಸಾಧನೆಗೆ ಬಹುಪರಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್​ ಶೃಂಗ ಸಭೆಯಲ್ಲೂ ಇಂದು ಚಂದ್ರಯಾನದ ಯಶಸ್ಸಿನ ಸಂಭ್ರಮ.

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಬುಧವಾರ ಚಂದ್ರಯಾನ -3ರ ಯಶಸ್ಸಿಗಾಗಿ ಭಾರತವನ್ನು ಅಭಿನಂದಿಸಿದ್ದಾರೆ ಹಾಗೂ ಇದು ಬ್ರಿಕ್ಸ್​ಗೆ ಮಹತ್ವದ ಸಂದರ್ಭ ಎಂದು ಬಣ್ಣಿಸಿದ್ದಾರೆ.

15ನೇ ಬ್ರಿಕ್ಸ್ ಶೃಂಗಸಭೆಯ ಮುಕ್ತ ಅಧಿವೇಶನದಲ್ಲಿ ಮಾತನಾಡಿದ ರಾಮ್​​ಫೋಸಾ, ನಾನು ಭಾರತವನ್ನು ಅಭಿನಂದಿಸಲು ಬಯಸುತ್ತೇನೆ, ವಿಶೇಷವಾಗಿ ಬಾಹ್ಯಾಕಾಶ ಸಾಧನೆ ಬಗ್ಗೆ ಅಭಿನಂದನೆಗಳಿವೆ. ಚಂದ್ರಯಾನ -3 ಚಂದ್ರನ ಮೇಲೆ ಇಳಿದಿದ್ದು ನಾವು ನಿಮ್ಮನ್ನು ಅಭಿನಂದಿಸುತ್ತೇವೆ ಎಂದು ಹೇಳಿದ್ದಾರೆ.

ಇದು ನಮಗೆ ಒಂದು ಮಹತ್ವದ ಸಂದರ್ಭ. ನಿಮ್ಮೊಂದಿಗೆ ನಾವು ಸಂತೋಷಪಡುತ್ತೇವೆ. ಈ ಮಹಾನ್ ಸಾಧನೆಯ ಸಂತೋಷದಲ್ಲಿ ನಾವು ನಿಮ್ಮೊಂದಿಗೆ ಸೇರುತ್ತೇವೆ ಎಂದು ಅವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!