ದಿನಭವಿಷ್ಯ| ಕೆಲಸದ ಜಾಗದಲ್ಲಿ ನಿಮಗೆ ಅಸಹನೀಯ ಬೆಳವಣಿಗೆ ಉಂಟಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ನಷ್ಟ, ಕಳ್ಳತನ ಉಂಟಾದೀತು. ವೃತ್ತಿಯಲ್ಲಿ ಯಶಸ್ಸಿಗೆ ಕಠಿಣ ಶ್ರಮ ಹಾಕಬೇಕಾಗುವುದು.

ವೃಷಭ
ಸಂಗಾತಿ ಜತೆಗೆ ಬಿಕ್ಕಟ್ಟು ಉಂಟಾದೀತು. ಸಮನ್ವಯದಿಂದ ಪರಿಹರಿಸಿ. ಕೆಲಸದ ಒತ್ತಡದಿಂದ ತಲೆನೋವು, ಬೆನ್ನು ನೋವು ಉಂಟಾದೀತು.

ಮಿಥುನ
ಉದ್ಯೋಗದಲ್ಲಿ ಫಲಪ್ರದ ದಿನ. ಕಾರ್ಯಸಿದ್ಧಿ. ಹಣದ ವಿಚಾರದಲ್ಲೂ ತೃಪ್ತಿಕರ ಬೆಳವಣಿಗೆ. ಆತ್ಮೀಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುವುದು.

ಕಟಕ
ಕೆಲಸದ ಜಾಗದಲ್ಲಿ ನಿಮಗೆ ಅಸಹನೀಯ ಬೆಳವಣಿಗೆ ಉಂಟಾದೀತು. ಇತರರ ಅಸಹಕಾರ. ಆಪ್ತೇಷ್ಟರ ಜತೆ ಹೊಂದಿಕೊಂಡು ನಡೆಯಿರಿ.

ಸಿಂಹ
ಮನೆಯಲ್ಲಿ ಅಭಿಪ್ರಾಯ ಭೇದ ಉಂಟಾದೀತು. ನಿಮ್ಮದೇ ಅಭಿಪ್ರಾಯ ಹೇರಲು ಹೋಗಬೇಡಿ. ಇತರರ ಭಾವನೆಗೂ ಬೆಲೆ ಕೊಡಿ. ಹೊಂದಾಣಿಕೆ ಒಳ್ಳೆಯದು.

ಕನ್ಯಾ
ಕಷ್ಟಕರ ಗುರಿಯನ್ನೂ ಇಂದು ಸಾಧಿಸುವಿರಿ. ಮಾನಸಿಕ ನಿರಾಳತೆ. ಆರ್ಥಿಕವಾಗಿಯೂ ತೃಪ್ತಿಕರ ಬೆಳವಣಿಗೆ. ಹಳೆಯ ಸ್ನೇಹಿತರ ಭೇಟಿ ಸಂಭವ.

ತುಲಾ
ಹಳಿತಪ್ಪಿದ್ದ ವ್ಯವಹಾರ ಮತ್ತೆ ಸರಿದಾರಿಗೆ ಬರುವುದು. ಕಾರ್ಯ ಸುಲಲಿತ. ಮನೆಯಲ್ಲಿನ ಅಸಮಾಧಾನ ಕೂಡಾ ಪರಿಹಾರ. ತಾಳ್ಮೆಯಿಂದ ನಡೆದುಕೊಳ್ಳಿ.

ವೃಶ್ಚಿಕ
ಕೆಲವಾರು ಪ್ರಮುಖ ನಿರ್ಧಾರ ತಾಳುವ ಅವಕಾಶ ಒದಗುವುದು. ವಿವೇಚಿಸಿ ನಿರ್ಧರಿಸಿ. ಇತರರ ಮಾತನ್ನಷ್ಟೇ ಕೇಳದಿರಿ. ಹಣದ ಖರ್ಚು ಅಧಿಕವಾಗುವುದು.

ಧನು
ಕೌಟುಂಬಿಕ ಅಶಾಂತಿ ತೊಡೆಯಲು ಆದ್ಯತೆ ಕೊಡಿ. ಇತರರು ನಿಮಗೆ ಬಗ್ಗಬೇಕೆಂದು ಕಾಯಬೇಡಿ. ನೀವೇ ಮೊದಲಾಗಿ ಕಾರ್ಯ ಆರಂಭಿಸಿ.

ಮಕರ
ಸವಾಲಿನ ದಿನ. ಹೆಚ್ಚುವರಿ ಹೊಣೆಗಾರಿಕೆ. ಸಂಗಾತಿ ಜತೆ ಭಿನ್ನಾಭಿಪ್ರಾಯ. ಆರ್ಥಿಕ ಬಿಕ್ಕಟ್ಟು ಪರಿಹಾರ, ಹಣದ ಸಮಸ್ಯೆ ನಿವಾರಣೆ.

ಕುಂಭ
ವೃತ್ತಿಗೆ ಸಂಬಂಧಿಸಿ ನಿಮಗೆ ಅನುಕೂಲಕರ ಬೆಳವಣಿಗೆ. ಬಿಕ್ಕಟ್ಟು ಪರಿಹಾರ. ಹಣದ ಹೂಡಿಕೆಯಲ್ಲಿ ಲಾಭ ಪಡೆಯುವಿರಿ. ಉತ್ಸಾಹದ ದಿನವಿದು.

ಮೀನ
ವೃತ್ತಿಯಲ್ಲಿ ಯಶಸ್ಸು. ಮನೆಯಲ್ಲಿ ವಾಗ್ವಾದ ನಡೆದೀತು. ಸಮಾಧಾನದಿಂದ ನಡಕೊಳ್ಳಿ. ಚರ್ಮಕ್ಕೆ ಸಂಬಂಧಿಸಿ ಕಿರಿಕಿರಿ ಉಂಟಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!