ಚಂದ್ರಯಾನ-3 ಯಶಸ್ಸು: ಚಂದ್ರನ ಮೇಲೆ ನಾವಿದ್ದೇವೆ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತವು ಹೊಸ ದಾಖಲೆ ಬರೆದಿದೆ.
ಈ ಕ್ಷಣದಲ್ಲಿ ಸೌತ್ ಆಫ್ರಿಕಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಇಸ್ರೋ ನೇರ ಪ್ರಸಾರದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್‌ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ಭೂಮಿಯನ್ನು ತಾಯಿ ರೂಪದಲ್ಲಿ ನೋಡುತ್ತದೆ. ಚಂದ್ರನನ್ನು ಮಾಮಾ ಎಂದು ಕರೆಯುತ್ತೇವೆ. ಹಿಂದೆ ಮಕ್ಕಳಿಗೆ ನಾವು ಚಂದಮಾಮ ಬಹಳ ದೂರದಲ್ಲಿದ್ದಾನೆ ಎಂದು ಹೇಳುತ್ತಿದ್ದೇವು. ಆದರೆ ಇದೀಗ ಹಾಗಲ್ಲ, ಇದೀಗ ಚಂದ್ರನ ಮೇಲೆ ನಾವಿದ್ದೇವೆ. ಭಾರತ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿದೆ ಎಂದು ಹೇಳಿದ್ದಾರೆ.

ನಾವು ಭೂಮಿಯಲ್ಲಿ ಸಂಕಲ್ಪ ಮಾಡಿದ್ದೇವೆ.ಇದೀಗ ಚಂದ್ರನಲ್ಲಿ ನಾವು ಸಂಕಲ್ಪ ಸಾಕಾರಗೊಳಿಸಿದ್ದೇವೆ. ಈಗಷ್ಟೇ ನಮ್ಮ ವಿಜ್ಞಾನಿಗಳು ಭಾರತ ಚಂದ್ರನ ನೆಲದಲ್ಲಿದ್ದೇವೆ ಎಂದು ಘೋಷಿಸಿದ್ದಾರೆ. ಇದು ನಮ್ಮ ಹೆಮ್ಮೆಯ ಪ್ರತೀಕವಾಗಿದೆ.

ನಾನು ಬ್ರಿಕ್ಸ್ ಶಂಗಸಭೆಗಾಗಿ ಸೌತ್ ಆಫ್ರಿಕಾದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಚಂದ್ರಯಾನ 3ರ ಮೇಲಿತ್ತು. ಇಡೀ ಭಾರತೀಯರು ಹೇಗೆ ಮನೆ ಮನೆಯಲ್ಲಿ ಕುಳಿತು ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಿದ್ದಾರೆ. ಸಂತಸ ಪಟ್ಟಿದ್ದಾರೆ. ಈ ಸಂಭ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ನಮ್ಮ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಸಮಸ್ತ ಭಾರತೀಯರ ಪರವಾಗಿ ಕೋಟಿ ಕೋಟಿ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಚಂದ್ರಯಾನ ಮಹಾ ಮಿಶನ್ ಕೇವಲ ಚಂದ್ರನ ಮೇಲೆ ಮಾತ್ರವಲ್ಲ, ಮತ್ತಷ್ಟು ದೂರ ಸಾಗಲಿದೆ. ಬಾಹ್ಯಾಕಾಶದ ಹಲವು ಕುತೂಹಗಳನ್ನು ಹೊರತರಲು ಭಾರತ ಶ್ರಮಿಸಲಿದೆ. ಶೀಘ್ರದಲ್ಲೇ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಉಪಗ್ರಹ ಉಡಾವಣೆ ಮಾಡಲಿದೆ. ಇದರ ಬಳಿಕ ಶುಕ್ರ ಗ್ರಹ ಕೂಡ ಇಸ್ರೋ ಅಧ್ಯಯನ ವಸ್ತುವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಚಂದ್ರಯಾನ 3 ಎಲ್ಲರಿಗೂ ಮಾದರಿಯಾಗಿದೆ. ಚಂದ್ರಯಾನ 2 ವೈಪಲ್ಯದಿಂದ ನಾವು ಹೇಗೆ ಯಶಸ್ಸು ಸಾಧಿಸಿದ್ದೇವೆ ಅನ್ನೋದು ಮಾದರಿಯಾಗಿದೆ. ಇಸ್ರೋದ ಮುಂದಿನ ಎಲ್ಲಾ ಪ್ರಯತ್ನ ಹಾಗೂ ಪ್ರಯೋಗಕ್ಕೆ ಶುಭಹಾರೈಸುತ್ತೇನೆ ಎಂದು ಮೋದಿ ಹೇಳಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!